Select Your Language

Notifications

webdunia
webdunia
webdunia
webdunia

ಕೊಪ್ಪಳದಲ್ಲಿ ರೈತರಿಗೆ ಸಲಹೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಹೇಳಿದ್ದೇನು ಗೊತ್ತಾ

Minister Nirmala Sitaraman

Sampriya

ಕೊಪ್ಪಳ , ಬುಧವಾರ, 15 ಅಕ್ಟೋಬರ್ 2025 (20:48 IST)
Photo Credit X
ಕೊಪ್ಪಳ: ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (ಪಿಎಂಎಫ್‌ಎಂಇ) ಮತ್ತು ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ (ಪಿಎಮ್‌ಡಿಡಿಕೆವೈ) ಯ ಸಂಪೂರ್ಣ ಬಳಕೆಯನ್ನು ರೈತರು ಮಾಡಿಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ರೈತರಿಗೆ ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ  ಸೀತಾರಾಮನ್ ಅವರು,  ಹೊಸ ಜಿಎಸ್‌ಟಿ ಸುಧಾರಣೆಗಳಿಂದ ಕೃಷಿಕ ಸಮುದಾಯಗಳಿಗೂ ಅನುಕೂಲವಾಗಲಿದೆ.

ಕೃಷಿ ಉತ್ಪನ್ನಗಳಲ್ಲಿ ಮೌಲ್ಯವರ್ಧನೆಯನ್ನು ಬೆಂಬಲಿಸಲು PMFME ಅನ್ನು ಪ್ರಾರಂಭಿಸಲಾಗಿದೆ. ಕೇಂದ್ರವು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುತ್ತದೆ ಮತ್ತು ಯೋಜನೆಯಡಿಯಲ್ಲಿ ವ್ಯವಹಾರಗಳನ್ನು ನವೀಕರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸೀತಾರಾಮನ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇದಾರನಾಥ ಯಾತ್ರಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಅದಾನಿ ಸಮೂಹ, ಇಲ್ಲಿದೆ ಮಾಹಿತಿ