ಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಬೆನ್ನಲ್ಲೇ ಸಚಿವ ಮಹದೇವಪ್ಪ ಹೊಸ ಬಾಂಬ್

Sampriya
ಸೋಮವಾರ, 1 ಡಿಸೆಂಬರ್ 2025 (18:14 IST)
ದಾವಣಗೆರೆ: ಬ್ರೇಕ್‌ಫಾಸ್ಟ್‌ ಮೀಟಿಂಗ್ ಬಳಿಕ ಸಿಎಂ ಕುರ್ಚಿ ವಿಚಾರವಾಗಿ ಸೈಲೆಂಟ್ ಆಗಿರುವ ವಿಚಾರ ನಡುವೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರು ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಗಟ್ಟಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ವಿಷಯವೇ ಇಲ್ಲ. ಇದೀಗ ಊಹಾಪೋಹಗಳು ಬೇಕಾಗಿಲ್ಲ. ? ಯಾವುದೇ ಗೊಂದಲ ಇರಬಾರದು ಎಂದು ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದರು.

ಇನ್ನೂ ಹೈಕಮಾಂಡ್ ಸೂಚನೆಯಂತೆ ಮುಂದಿನ ಐದು ವರ್ಷ ಸರ್ಕಾರವನ್ನು ನಡೆಸುತ್ತೇವೆ. 2028ರಲ್ಲಿ ಮತ್ತೇ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಕ್ರಿಕೆಟ್ ಆಡುವ 11 ಮಾತ್ರ ಬ್ಯಾಟ್‌ ಬೀಸಬೇಕು. ಉಳಿದವರು ಬ್ಯಾಟ್‌ ಬೀಸಿದರೆ ಏನು ಪ್ರಯೋಜನವಿಲ್ಲ. ಇನ್ನೂ ಯಾವ ಸ್ವಾಮೀಜಿಗಳು ತಮ್ಮ ಧ್ವನಿ ಎತ್ತಿದರೂ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು. 

ಇನ್ನೂ ಸರ್ಕಾರ ಸ್ಥಿರವಾಗಿದ್ದು, ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. 

ಇನ್ನೂ ಬಿಜೆಪಿಯ ಕಾಂಗ್ರೆಸ್‌ ಶಾಸಕರ ಖರೀದಿ ಆರೋ‍‍ಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೊದಲು ಅವರು ಯಾವಾ ರೀತಿ ಅಧಿಕಾರಕ್ಕೆ ಬಂದರು ಎಂಬುದನ್ನು ಹೇಳಲಿ. ಅವರೇನು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದಾರಾ? ಕನ್ನೇರಿ ಶ್ರೀಗಳು ಏನ್ ಹೇಳಿಕೆ ನೀಡುತ್ತಾರೆ ಎನ್ನುವುದು ಗೊತ್ತಿಲ್ಲ. ನನಗೆ ಬಾಬಾ ಸಾಹೇಬರ ಸಂವಿಧಾನದ ಬಗ್ಗೆ ಮಾತ್ರ ತಿಳಿದಿದೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ವಿರುದ್ಧ ಎಫ್‌ಐಆರ್‌: ಬಿಜೆಪಿಯಿಂದ ದ್ವೇಷ ರಾಜಕಾರಣ ಎಂದ ಸಿದ್ದರಾಮಯ್ಯ

ಕುರ್ಚಿಗಾಗಿ ಡಿಕೆ ಶಿವಕುಮಾರ್ ಈ ಕೆಲಸ ಮಾಡ್ತಿದ್ದಾರೆ: ಜೆಡಿಎಸ್ ಸ್ಪೋಟಕ ಆರೋಪ

ಕೆಟ್ಟುಹೋದ ದೋಣಿಯ ಎಂಜಿನ್, ಆಂಧ್ರಕ್ಕೆ ಬಂದ ಬಾಂಗ್ಲಾದ 13 ಮೀನುಗಾರರು ವಶಕ್ಕೆ

ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಡಿ: ದಿನೇಶ್ ಗುಂಡೂರಾವ್

ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲೇ ಆಯ್ತು, ಉದ್ಯೋಗ ಎಲ್ಲಿ ಸ್ವಾಮಿ: ಆರ್ ಅಶೋಕ್ ಪ್ರಶ್ನೆ

ಮುಂದಿನ ಸುದ್ದಿ
Show comments