Webdunia - Bharat's app for daily news and videos

Install App

ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದ ಸಚಿವ ಮಹದೇವಪ್ಪ: ಅಂಕಿ ಅಂಶ ಏನು ಹೇಳುತ್ತದೆ

Krishnaveni K
ಸೋಮವಾರ, 4 ಆಗಸ್ಟ್ 2025 (09:49 IST)
Photo Credit: X
ಮೈಸೂರು: ಕರ್ನಾಟಕದ ಹೆಮ್ಮೆಯ ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಮಹದೇವಪ್ಪ ನೀಡಿರುವ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಇದೀಗ ಅಂಕಿ ಅಂಶ ಏನು ಹೇಳುತ್ತದೆ ನೋಡೋಣ.

ಕೆಆರ್ ಎಸ್ ಡ್ಯಾಮ್ ನಿರ್ಮಾಣ ಮಾಡಿದ್ದು ಮೈಸೂರು ರಾಜವಂಶಸ್ಥರು. ಅದರಿಂದಾಗಿ ಇಂದಿಗೂ ಮೈಸೂರು, ಮಂಡ್ಯ, ಬೆಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆ, ಕೃಷಿಕರ ಸಮಸ್ಯೆ ನಿವಾರಣೆಯಾಗಿದೆ. ಇಂದಿಗೂ ಜನ ಈ ವಿಚಾರದಲ್ಲಿ ಮೈಸೂರು ರಾಜವಂಶಸ್ಥರನ್ನು ಸ್ಮರಿಸಿಕೊಳ್ಳುತ್ತಾರೆ.

ಆದರೆ ಸಚಿವ ಮಹದೇವಪ್ಪ ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಈಗಲೂ ಅದರ ಕುರುಹುಗಳಿವೆ ಎಂದು ಹೇಳಿಕೊಂಡಿದ್ದರು. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಅಂಕಿ ಅಂಶ ಗಮನಿಸಿದರೆ ಕೆಆರ್ ಎಸ್ ಡ್ಯಾಮ್ ನಿರ್ಮಾಣ ಆರಂಭವಾಗಿದ್ದು  1911 ರಲ್ಲಿ. ಟಿಪ್ಪು ಸುಲಸ್ತಾನ್ ತೀರಿಕೊಂಡಿದ್ದು 1799 ರಲ್ಲಿ. ಅಂದರೆ ಟಿಪ್ಪು ನಿಧನವಾಗಿ 112 ವರ್ಷದ ಬಳಿಕ ಕೆಆರ್ ಎಸ್ ಡ್ಯಾಮ್ ನಿರ್ಮಾಣ ಆರಂಭವಾಗಿದ್ದು. ಹೀಗಾಗಿ ಮಹದೇವಪ್ಪಗೆ ಈ ಅಂಕಿ ಅಂಶ ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಝಾಡಿಸಿದ್ದಾರೆ. ಟಿಪ್ಪು ಸುಲ್ತಾನ್ ಮೇಲಿನ ಪ್ರೇಮದಿಂದ ಮೈಸೂರು ರಾಜರ ಕೊಡುಗೆಯನ್ನೇ ಕಡೆಗಣಿಸುತ್ತಿದ್ದಾರೆ. ಸ್ವಲ್ಪವಾದರೂ ತಿಳಿದುಕೊಂಡು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ವಿರಾಮದ ಬಳಿಕ ಇಂದು ಹೇಗಿರಲಿದೆ ಆಪರೇಷನ್ ಅಸ್ಥಿಪಂಜರ

ಶ್ರೀಮಂತನಾಗಿದ್ದರೂ ಜೈಲಲ್ಲಿ ಹೇಗಿದ್ದಾರೆ ಪ್ರಜ್ವಲ್ ರೇವಣ್ಣ

Karnataka Weather: ಈ ವಾರ ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments