Select Your Language

Notifications

webdunia
webdunia
webdunia
webdunia

ಕುರುಬರ ಕ್ಷಮೆ ಕೇಳೋದಿಲ್ಲ ಎಂದ ಸಚಿವ ಮಾಧುಸ್ವಾಮಿ

ಕುರುಬರ ಕ್ಷಮೆ ಕೇಳೋದಿಲ್ಲ ಎಂದ ಸಚಿವ ಮಾಧುಸ್ವಾಮಿ
ಬೆಂಗಳೂರು , ಬುಧವಾರ, 20 ನವೆಂಬರ್ 2019 (18:50 IST)
ಕನಕ ವೃತ್ತ ವಿವಾದದ ಕುರಿತು ಕುರುಬರ ಕ್ಷಮೆಯನ್ನು ನಾನು ಕೇಳೋದಿಲ್ಲ ಅಂತ ಸಚಿವರೊಬ್ಬರು ಖಡಕ್ಕಾಗಿ ಹೇಳಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಚಿವ ಮಾಧುಸ್ವಾಮಿ ಪರವಾಗಿ ಜನತೆಗೆ ಕ್ಷಮೆ ಕೋರಿದ್ದಾರೆ.

ಆದರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತ್ರ ಕುರುಬರ ಕ್ಷಮೆ ಕೇಳೋದಿಲ್ಲ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಏಕ ವಚನದಲ್ಲಿ ಸ್ವಾಮೀಜಿ ಜೊತೆ ಮಾತನಾಡಿಲ್ಲ. ಖಾವಿ ಬಟ್ಟೆ ಧರಿಸಿದವರಿಗೆಲ್ಲರಿಗೂ ಗೌರವ ಕೊಡುವೆ. ನಾನು ವಿಷಾದ ವ್ಯಕ್ತಪಡಿಸುತ್ತೇನೆ, ಆದರೆ ಕ್ಷಮೆ ಕೇಳೋ ಮಾತೇ ಇಲ್ಲ ಅಂತ ಹೇಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಬಣ್ಣ ಬಯಲು - ಚಿನ್ನ ಬಿಟ್ಟು ಟೊಮೆಟೋ ಕಿವಿಯೋಲೆ, ಹಾರ ಹಾಕಿಕೊಂಡ ವಧು