ಉಡುಪಿ: ಪ್ರತಾಪ್ ಸಿಂಹ ಹಾಗೂ ಪ್ರದೀಪ್ ಈಶ್ವರ್‌ಗೆ ಅಕ್ಕನ ಸ್ಥಾನದಲ್ಲಿ ನಿಂತು ಕಿವಿಮಾತನ್ನು ಹೇಳುತ್ತೇನೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಸಚಿವೆ, ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿರುವಾಗ , ನಾವು ರೋಲ್ ಮಾಡೆಲ್ ಆಗಿ ಬದುಕಬೇಕು ಹೊರತು ನಾಚಿಕೆ ಆಗುವ ಹಾಗೇ ಅಲ್ಲ ಅಲ್ಲ ಎಂದರು.
ನಿಮ್ಮ ಆಚಾರ-ವಿಚಾರ ಭಾಷೆಯನ್ನು ಜನ ನೋಡ್ತಾರೆ. ನಿಮ್ಮ ತಂದೆ-ತಾಯಿಯನ್ನು ಎಳ್ಕೊಂಡು ಬರುವುದು ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಬುದ್ಧಿವಂತರಾಗಿರುವ ಇಬ್ಬರು, ಇಲ್ಲಿಗೆ ಬಿಟ್ಟುಬಿಡಿ. ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆಂದರು.
ಈಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು.