Publish Date: Sat, 08 Apr 2023 (16:44 IST)
Updated Date: Sat, 08 Apr 2023 (16:56 IST)
ಲಿಸ್ಟ್ ರಿಲೀಸ್‌ಗೂ ಮುನ್ನ ಕೊಪ್ಪಳ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಮೂವರು ಹಾಲಿ ಶಾಸಕರಿಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ. ಸಚಿವ ಹಾಲಪ್ಪ ಆಚಾರ್ಗೂ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ..ಹಾಲಪ್ಪ ಆಚಾರ್ ಬದಲಾಗಿ, ಬಿಜೆಪಿ ಯುವ ಮುಖಂಡ ನವೀನ್ ಗುಳಗಣ್ಣವರ್ಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆಯಿದೆ.. ಟಿಕೆಟ್ ಮಿಸ್ ಆಗುವ ಹಿನ್ನೆಲೆಯಲ್ಲಿ ಹಾಲಪ್ಪ ಆಚಾರ್ ದೆಹಲಿಗೆ ದೌಡಾಯಿಸಿದ್ದು, ಹಾಲಪ್ಪ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹಿನ್ನೆಲೆ ಟಿಕೆಟ್ ಕೊಡಲು ಪಕ್ಷ ಹಿಂದೇಟು ಹಾಕುತ್ತಿದೆ.