Publish Date: Sat, 08 Apr 2023 (16:20 IST)
Updated Date: Sat, 08 Apr 2023 (16:43 IST)
BJP ಟಿಕೆಟ್ ಲಿಸ್ಟ್ ರೆಡಿಯಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ. ಈ ಬಾರಿ ಹೈಕಮಾಂಡ್ ಅಳೆದು ತೂಗಿ ಗೆಲ್ಲುವವರಿಗೆ ಟಿಕೆಟ್ ಫೈನಲ್ ಮಾಡಿದೆ ಎಂದು BJP ಉನ್ನತ ಮೂಲಗಳು ತಿಳಿಸಿವೆ. ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡ ಶಾಸಕರಿಗೆ ಈ ಬಾರಿ ಟಿಕೆಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಿದ್ದು, ಕೆಲ ಶಾಸಕರಲ್ಲಿ ಆತಂಕ ಮನೆ ಮಾಡಿದೆ.. ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ ಪತ್ನಿ ಮಂಗಳಾ ಗೌರಿ ಹಾವೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಪತಿ ಅರುಣ್ ಕುಮಾರ್ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪತಿ ಅರುಣ್ ಕುಮಾರ್ಗೆ ಟಿಕೆಟ್ ಕೊಡಿಸಲು ಪತ್ನಿ ಮಂಗಳಾ ಗೌರಿ ಸರ್ಕಸ್ ಮಾಡ್ತಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಹೋಗೋಕೂ ಮುನ್ನ ಮಂಗಳಾ ಗೌರಿ ಸಿಎಂ ಅವರನ್ನು ಭೇಟಿಯಾಗಿದ್ದಾರೆ.. ಸ್ವಪಕ್ಷೀಯರ ಅಸಮಾಧಾನ ಹಿನ್ನೆಲೆ ಪೂಜಾರಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಿದೆ.