Select Your Language

Notifications

webdunia
webdunia
webdunia
webdunia

ಸಚಿವ ಡಿ.ಕೆ ಶಿವಕುಮಾರ ಹೇಳಿಕೆಗೆ ಎಮ್. ಬಿ. ಪಾಟೀಲ್ ಟಾಂಗ್

ಸಚಿವ ಡಿ.ಕೆ ಶಿವಕುಮಾರ ಹೇಳಿಕೆಗೆ ಎಮ್. ಬಿ. ಪಾಟೀಲ್  ಟಾಂಗ್
ವಿಜಯಪುರ , ಗುರುವಾರ, 18 ಅಕ್ಟೋಬರ್ 2018 (22:02 IST)
ಲಿಂಗಾಯತ ಪ್ರತ್ಯೇಕತೆ ಕಾರಣದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಸಚಿವ ಡಿ.ಕೆ ಶಿವಕುಮಾರ ಹೇಳಿಕೆಗೆ ಮಾಜಿ ಸಚಿವ ಹಾಗೂ ಲಿಂಗಾಯತ ಪ್ರತ್ಯೇಕತೆ ಹೋರಾಟದ ಮುಂಚೂಣಿ ನಾಯಕ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಗದಗಿನಲ್ಲಿ ಸಚಿವ ಡಿಕೆಶಿ ಲಿಂಗಾಯತ ಪ್ರತ್ಯೇಕತೆಯಿಂದ ಹಿನ್ನಡೆಯಾಯಿತೆಂದು ಹಾಗೂ ರಂಭಾಪುರಿ ಶ್ರೀಗಳ ಕ್ಷಮೆ ಕೇಳಿದ್ದು ಸಮಂಜಸವಲ್ಲಾ ಎಂದು ಎಂ.ಬಿ ಪಾಟೀಲ್ ಹೇಳಿದರು. ಸರ್ಕಾರ ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಯಾರೇ ಓರ್ವ ವ್ಯಕ್ತಿ ಸಮಾಜ ಸಂಘ ಸಂಸ್ಥೆ ಸರ್ಕಾರಕ್ಕೆ ಮನವಿ ಕೊಟ್ಟ ವೇಳೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅದೇ ರೀತಿ ಲಿಂಗಾಯತ ಪ್ರತ್ಯೇಕತೆ ಬೇಡಿಕೆಗಾಗಿ ಎರಡು ಅರ್ಜಿಗಳನ್ನು ಕೊಟ್ಟಿದ್ದರು. ಆ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಆಗಿನ ಸಿ.ಎಂ ಸಿದ್ದರಾಮಯ್ಯ ನೀಡಿದ್ದರು.   ನಾಗಮೋಹನ್ ದಾಸ್ ನೇತೃತ್ವದ ಕಮಿಟಿಯವರು, ಪರಿಣಿತರು,ತಜ್ಞರು ನಿರ್ಣಯ ತೆಗೆದುಕೊಂಡು ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಸರ್ಕಾರ ಇರದಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆ ಹಾಗೂ ಅದಕ್ಕೆ  ಕ್ಷಮೆಯಾಚಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಡಿಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲಾ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್  ಕುಟುಕಿದ್ದಾರೆ. 
ಇನ್ನು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಿಂದ ಪಕ್ಷಕ್ಕೆ ಹಾನಿಯಾಗಿಲ್ಲ ಎಂದು ಸಮರ್ಥನೆ ನೀಡಿದರು. ಹಾಗೆ ನೋಡಿದರೆ ಡಿಕೆ ಶಿವಕುಮಾರ್ ಅವರೇ ವಿಚಾರ ಮಾಡಬೇಕಾಗುತ್ತದೆ. ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು, ಕೋಲಾರ ಸೇರಿದಂತೆ ಒಕ್ಕಲಿಗರ ಪ್ರಾಭಲ್ಯವಿರುವ ಪ್ರದೇಶಗಳಲ್ಲಿ ಎಷ್ಟು ಒಕ್ಕಲಿಗರ ಸೀಟುಗಳನ್ನು ಕಾಂಗ್ರೆಸ್  ಗೆಲ್ಲಿಸಿದ್ದಾರೆ ಎಂದು  ಪ್ರಶ್ನೆ ಮಾಡಿದರು. ಆದರೆ ಧರ್ಮದ ಹೆಸರಿನಲ್ಲಿ ಹೇಳಿಕೆ ನೀಡುವುದು ಸರಿಯಲ್ಲಾ ಎಂದು ಡಿಕೆಶಿಗೆ ಟಾಂಗ್ ನೀಡಿದರು. ನಾವು ಬಸವಣ್ಣನವರನ್ನು ಗೌರವಿಸುವ  ಹಾಗೆ ಕೆಂಪೇಗೌಡರನ್ನು ಗೌರವಿಸುತ್ತೇವೆ. ಒಕ್ಕಲಿಗರ  ಸಮಾಜವನ್ನೂ ಗೌರವಿಸಬೇಕಾಗುತ್ತದೆ. ಲಿಂಗಾಯತ ಸಮಾಜವನ್ನೂ ಗೌರವಿಸಬೇಕಾಗುತ್ತದೆ. ಅದು ನಮ್ಮ ಅಸ್ಮಿತೆಯೆಂದು ಪರೋಕ್ಷವಾಗಿ ನಮ್ಮ ಧರ್ಮಕ್ಕೂ ಸರಿಯಾದ ಗೌರವ ಸಿಗಬೇಕೆಂದು ಹೇಳಿದರು. ಆದರೆ ಡಿಕೆಶಿ ಲಿಂಗಾಯತ ಪ್ರತ್ಯೇಕತೆ ಕುರಿತು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲಾ. ಪಕ್ಷಕ್ಕೆ ಹಿನ್ನಡೆಯ ವಿಚಾರ ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು. ಯಾರಿಂದ ಯಾಕೆ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದು ಬಹಿರಂಗವಾಗಿ ನಡೆಯುವ ಚರ್ಚೆಯಾಗಬಾರದು. ಬಹಿರಂಗವಾಗಿ ಹೇಳಿಕೆ ನೀಡುವುದು ಏನೂ ಆಗಲಾರದ್ದಕ್ಕೆ ಕ್ಷಮೆ ಕೇಳುವಂತದ್ದು ಸರಿಯಾದ ಮಾರ್ಗವಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹಾಲಿ ಸಚಿವ ಡಿ.ಕೆ ಶಿವಕುಮಾರ್ ಗೆ ಒಂದು ರೀತಿ ಕುಟುಕು ಮಾತು ಹೇಳಿದರು.  



Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಜಾಗರಣೆ ಮಾಡಿದ ಬಾಣಂತಿಯರು