Publish Date: Sun, 29 Sep 2019 (12:25 IST)
Updated Date: Sun, 29 Sep 2019 (12:27 IST)
ಮೈಸೂರು : ದಸರಾ ಉದ್ಘಾಟನೆಯ ವೇಳೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಚಾಮುಂಡಿ ಬೆಟ್ಟದ ಸಿಬ್ಬಂದಿ ವಿರುದ್ಧ ಪುಲ್ ಗರಂ ಆಗಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದರು ದಸರಾ ಉದ್ಘಾಟನೆಗೆ ಬಂದಿದ್ದ ವೇಳೆ ಅವರ ಭದ್ರತಾ ಸಿಬ್ಬಂದಿ ಜೊತೆ ಚಾಮುಂಡಿ ಬೆಟ್ಟದ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು. ಇದರಿಂದ ಕೇಂದ್ರ ಸಚಿವ ಗರಂ ಆಗಿದ್ದಾರೆ.
ದಸರಾ ಉದ್ಘಾಟನೆಗೆ ಬರುವುದಿಲ್ಲ, ನಾನು ವಾಪಾಸ್ ಹೋಗ್ತೀನಿ ಎಂದು ಸಿಬ್ಬಂದಿಗಳ ಜೊತೆ ವಾಗ್ದಾಳಿ ನಡೆಸದ ಸಚಿವರನ್ನು ಪೊಲೀಸರು ಸಮಾಧಾನಪಡಿಸಿ ಒಳಗೆ ಕಳುಹಿಸಿದ್ದಾರೆ.