Select Your Language

Notifications

webdunia
webdunia
webdunia
webdunia

ಮೊದಲ ದಿನದ ನವರಾತ್ರಿಗೆ ಶುಭಕೋರಿದ ಪ್ರಧಾನಿ ಮೋದಿ

ನವದೆಹಲಿ
ನವದೆಹಲಿ , ಭಾನುವಾರ, 29 ಸೆಪ್ಟಂಬರ್ 2019 (12:23 IST)
ನವದೆಹಲಿ : ಇಂದಿನಿಂದ ನವರಾತ್ರಿ ಉತ್ಸವ ಆರಂಭವಾಗಿದ್ದು, ಇಂದು ಮೊದಲ ದಿನದ ನವರಾತ್ರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಶುಭ ಕೋರಿದ್ದಾರೆ.




ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ದೇಶದ ಎಲ್ಲ ಜನರಿಗೂ ನವರಾತ್ರಿ ಉತ್ಸವದ ಶುಭಾಶಯ. ಜೈ ಮಾತಾ ಜಿ. ಶಕ್ತಿಯನ್ನು ಪೂಜಿಸುವ ಪವಿತ್ರ ಹಬ್ಬವಾದ ನವರಾತ್ರಿಯಂದು ನಿಮಗೆಲ್ಲರಿಗೂ ಅಭಿನಂದನೆಗಳು. ಮಾ ದುರ್ಗಾ ನಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಹೊಸ ಹುರುಪು ತುಂಬಬೇಕು. ಜೈ ಅಂಬೆ ಜಗದಂಬೆ ತಾಯಿ! ಎಂದು ತಿಳಿಸಿದ್ದಾರೆ.


ಅಲ್ಲದೇ ನವರಾತ್ರಿಯ ಮೊದಲ ದಿನ ನಾವು ದುರ್ಗೆಯ ಮೊದಲ ರೂಪ ಶೈಲಪುತ್ರಿ ಆರಾಧನೆ ಮಾಡುತ್ತೇವೆ. ಶಕ್ತಿ ಮತ್ತು ಶಾಂತಿಯ ಸಂಕೇತವಾದ ತಾಯಿ ಶೈಲಪುತ್ರಿ ಇಡೀ ಜಗತ್ತಿಗೆ ಒಳ್ಳೆಯದನ್ನು ಮಾಡಬೇಕು, ಇದು ಆಸೆ ಎಂದು ಟ್ವಿಟ್ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾದ ಮಹಿಷ ದಸರಾ ಸಂಘಟಕರು ಅರೆಸ್ಟ್