ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯುಂಟಾಗಿದೆ ಎಂಬ ಸುದ್ದಿಗಳನ್ನು ಆರೋಗ್ಯ ಸಚಿವ ಡಾ. ಸುಧಾಕರ್ ನಿರಾಕರಿಸಿದ್ದಾರೆ.
ನಿನ್ನೆ ಹಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಆಕ್ಸಿಜನ್ ಗಾಗಿ ಪರದಾಡಿದ್ದರು. ಆದರೆ ಆರೋಗ್ಯ ಸಚಿವರು ಇದನ್ನು ನಿರಾಕರಿಸಿದ್ದಾರೆ. ಆಕ್ಸಿಜನ್ ಕೊರತೆಯಾಗಿಲ್ಲ. ಖಾಸಗಿಯವರು ಹಣ ಪಾವತಿಸದ ಕಾರಣ ಆಕ್ಸಿಜನ್ ಸಿಕ್ಕಿರಲಕ್ಕಿಲ್ಲ. ಅದಕ್ಕೆ ಕೊರತೆ ಎನ್ನುವುದು ತಪ್ಪು ಎಂದಿದ್ದಾರೆ.
ಇನ್ನು, ಈಗಾಗಲೇ ನಾನು ಫನಾ ಅಸೋಸಿಯೇಷನ್ ಜೊತೆ ಮಾತನಾಡಿದ್ದೇನೆ. ಕಡಿಮೆ ಇರುವ ಕಡೆ ಜಂಬೋ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.