ಬೆಂಗಳೂರು: ಕೊರೋನಾ ಸೋಂಕಿತರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದರೆ ಏನು ಮಾಡೋಣ? ಇದು ಸದ್ಯಕ್ಕೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೇಳಿಬರುತ್ತಿರುವ ಮಾತು.
ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿ ಜನ ನಿಂತಿದ್ದಾರೆ. ಆದರೆ ಬೆಡ್ ಸಿಗದೇ ಪರದಾಡುವಂತಾಗಿದೆ. ನಿನ್ನೆ ಕೆಲವು ಕಡೆ ಆಕ್ಸಿಜನ್ ಕೊರತೆಯೂ ಕಂಡುಬಂದಿದೆ. ಅತ್ತ ಚಿಕಿತ್ಸೆ ಕೊಡಿಸುವ ವೈದ್ಯರೂ ಫುಲ್ ಬ್ಯುಸಿ!
ಇದರಿಂದಾಗಿ ಹಲವು ಆಸ್ಪತ್ರೆಗಳಲ್ಲಿ ಹೋಂ ಕ್ವಾರಂಟೈನ್ ಗೆ ಸಲಹೆ ನೀಡಲಾಗುತ್ತಿದೆ. ಇಂಜಕ್ಷನ್ ಕೊರತೆಯಾಗಿದ್ದಕ್ಕೆ ಆಂಟಿ ಬಯೋಟಿಕ್ ಗುಳಿಗೆಗಳನ್ನು ನೀಡಲಾಗುತ್ತಿದೆ. ಆಕ್ಸಿಜನ್ ಕೊರತೆ ನೀಗಿಸಲು ಇದೀಗ ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಿದೆ. ಈಗಲೇ ಹೀಗಾದರೆ, ಇನ್ನೂ ದಿನ ಕಳೆದಂತೆ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪಬಹುದು ಎಂಬ ಭೀತಿಯಲ್ಲಿ ಜನರಿದ್ದಾರೆ.