ಮಂಡ್ಯ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ನಡುವಿನ ವಾಕ್ಸಾಮರ ಮುಂದುವರೆದಿದೆ. ತನ್ನ ಆರೋಗ್ಯ ಹಾಳಾಗೋಕೆ ಚಲುವರಾಸ್ವಾಮಿ ಕಾರಣ ಎಂದ ಕುಮಾರಸ್ವಾಮಿಗೆ ಇದೀಗ ಚಲುವರಾಯಸ್ವಾಮಿ ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ನನಗೆ ನಾನ್ ವೆಜ್ ತಿನ್ನುವ ಹೆಚ್ಚಿನ ಅಭ್ಯಾಸವಿಲ್ಲ. ಅಥವಾ ಹೆಚ್ಚಿಗೆ ಬೇರೆ ಅಭ್ಯಾಸ ಜಾಸ್ತಿ ಯಾರಿಗಿದೆ ಎನ್ನುವುದನ್ನು ಅವರೇ ಆತ್ಮಸಾಕ್ಷಿ ಮಾಡಿಕೊಳ್ಳಬೇಕು. ಅವರು ಜತೆ ಒಂದು ಗಂಟೆ ಹೆಚ್ಚಿಗೆ ಕೂತ್ರೇ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಿ. ನಾವು ಅವರು ಒಬ್ಬರೇ ಇರುತ್ತಾರೆ ಎನ್ನುವ ಕಾರಣಕ್ಕೆ ಕೆಲವೊಂದು ಸಲ ಒಟ್ಟಿಗೆ ಕೂತಿದ್ದೇವೆ.
ನಾವು ಹೆಂಡ್ತಿ ಮಕ್ಕಳ ಜತೆ ಸಮಯ ಕಳೆಯಲು ಮನೆಗೆ 8 ಗಂಟೆಗೆ ಹೋಗ್ತಾ ಇದ್ವಿ. ಆದರೆ ಕುಮಾರಸ್ವಾಮಿ ಅವರು ನಿದ್ದೆ ಮಾಡದೆ, ವೈಯಕ್ತಿಕ ಸಮಸ್ಯೆಗಳಿಂದ ಮನೆಗೆ 8 ಗಂಟೆಯಾದ್ರೂ ಹೋಗ್ತಾ ಇರ್ಲಿಲ್ಲ. ಈ ಸಂದರ್ಭದಲ್ಲಿ ಅವರು ಒಬ್ಬರೇ ಇರುತ್ತಾರಲ್ಲ ಎಂಬ ಕಾರಣ ಅವರ ಜತೆ ಕುಳಿತುಕೊಳ್ಳುತ್ತಿದ್ದೇವು. ಅವರು ಮನೆಗೆ ಯಾಕೆ ಹೋಗ್ತಾ ಇರ್ಲಿಲ್ಲ ಅಂತಾ ನೀವೇ ಕೇಳಬೇಕೆಂದರು. ಈ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ ಎಂದರು.
ಭೂಕಬಳಿಕೆ, ದುಡ್ಡು ಹೊಡೆದುಕೊಂಡಿದ್ದಾರೆ ಎನ್ನುವ ಎಚ್ ಡಿ ಕುಮಾರಸ್ವಾಮಿ ಅವರು ಹುಟ್ಟುತ್ತಲೇ ಶ್ರೀಮಂತರ ಎಂದು ಪ್ರಶ್ನೆ ಮಾಡಿದ್ದಾರೆ. 15 ಎಕರೆಯನ್ನು ಹೆಚ್ಚುವರಿ ಮಾಡಿಕೊಂಡಿದ್ದಾರಲ್ಲ ಅದಕ್ಕೆ ಯಾರು ಹೊಣೆ ಎಂದು ರೇಗಾಡಿದರು.