Select Your Language

Notifications

webdunia
webdunia
webdunia
webdunia

ಪ್ರವೀಣ್ ನೆಟ್ಟಾರು ಹತ್ಯೆಯ ಮಾಸ್ಟರ್‌ ಮೈಂಡ್‌ ಶಾಫಿ ಬೆಳ್ಳಾರೆಗೆ ಮುತ್ತಿಕ್ಕ ಯುವಕನಿಗಿರುವ ನಂಟು ಬಹಿರಂಗಪಡಿಸಿ: ಬಿಜೆಪಿ

Praveen Nettaru Case

Sampriya

ಬೆಂಗಳೂರು , ಮಂಗಳವಾರ, 8 ಏಪ್ರಿಲ್ 2025 (19:02 IST)
ಬೆಂಗಳೂರು: ಪ್ರವೀಣ್ ನೆಟ್ಟಾರು ಪ್ರಕರಣದ ಮಾಸ್ಟರ್‌ ಮೈಂಡ್ ಅನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಆತನಿಗೆ ಮುತ್ತಿಕ್ಕಿ ಸ್ವಾಗತಿಸಿದ ಮತಾಂಧ ಯುವಕನನ್ನು ಕೂಡಲೇ ಬಂಧಿಸಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ಸಂಬಂಧ ಯುವಕ ಪ್ರಕರಣದ ಆರೋಪಿಗೆ ಮುತ್ತಿಕ್ಕಿ ಸ್ವಾಗತಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡ ಬಿಜೆಪಿ ಸರ್ಕಾರದ ಮುಂದೆ ಹಲವು ಪ್ರಶ್ನೆಯನ್ನು ಮುಂದಿಟ್ಟಿದೆ. ಅದಲ್ಲದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಪ್ರಕರಣ ಸಂಬಂಧ ಆಕ್ರೋಶ ಹೊರಹಾಕಿರುವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.

ಕರ್ನಾಟಕದ ಕಾನೂನು & ಸುವ್ಯವಸ್ಥೆ  ಎಷ್ಟರ ಮಟ್ಟಿಗೆ ಹಳ್ಳ ಹಿಡಿದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ!!

ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ಅವರನ್ನು ಕೊಲೆಗೈದ ಭಯೋತ್ಪಾದಕ ಶಫಿ ಬೆಳ್ಳಾರೆಯನ್ನು ಪೊಲೀಸರ ಸಮ್ಮುಖದಲ್ಲಿಯೇ ಮತ್ತೊಬ್ಬ ಜಿಹಾದಿ ಬಹಿರಂಗವಾಗಿ ಚುಂಬಿಸುತ್ತಾನೆ ಅಂದರೆ ಏನರ್ಥ..!!

ಸಿಎಂ ಸಿದ್ದರಾಮಯ್ಯ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೆ, ಕೂಡಲೇ ಆ ಮತಾಂಧ ಯುವಕನನ್ನು ಬಂಧಿಸಿ, ಆತನಿಗೂ ಹಾಗೂ ಭಯೋತ್ಪಾದಕ ಶಫಿ ಬೆಳ್ಳಾರೆಗೂ ಇರುವ ನಂಟನ್ನು ಬಹಿರಂಗಪಡಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಕೈ ಶಾಸಕ ಭೇಟಿ ನೀಡಿದ್ದಕ್ಕೆ ದೇವಾಲಯ ಶುದ್ಧೀಕರಣ: ಬಿಜೆಪಿ ನಾಯಕನ ವಿರುದ್ಧ ಪಕ್ಷ ಕಠಿಣ ಕ್ರಮ