Select Your Language

Notifications

webdunia
webdunia
webdunia
webdunia

ಮೂರು ದಿನದ ಮಳೆಗೆ ಬೆಚ್ಚಿಬಿದ್ದ ಮಹಾನಗರ: ಅಪಾಯದ ಸ್ಥಳಗಳನ್ನು ಗುರುತಿಸಿದ ಬಿಬಿಎಂಪಿ

ಮೂರು ದಿನದ ಮಳೆಗೆ ಬೆಚ್ಚಿಬಿದ್ದ ಮಹಾನಗರ: ಅಪಾಯದ  ಸ್ಥಳಗಳನ್ನು ಗುರುತಿಸಿದ ಬಿಬಿಎಂಪಿ
bangalore , ಭಾನುವಾರ, 17 ಏಪ್ರಿಲ್ 2022 (19:55 IST)
ಬೆಂಗಳೂರು: ಬೇಸಿಗೆಯಲ್ಲಿ ಸುರಿದ ಎರಡು ದಿನದ ಮಳೆಗೆ ನಗರ ತತ್ತರಿಸಿರುವ ಬೆನ್ನಲ್ಲೇ ಬಿಬಿಎಂಪಿ 169 ಹೆಚ್ಚು ಅಪಾಯದ ಸ್ಥಳಗಳನ್ನು ಗುರುತಿಸಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆ ಸಂದರ್ಭದಲ್ಲಿ ನೀರು ನಿಲ್ಲುವ ರಸ್ತೆಗಳು ಹಾಗೂ ಪ್ರದೇಶಗಳ ಪಟ್ಟಿ ಮಾಡಲಾಗಿದೆ. 
 
ನಗರದಲ್ಲಿರುವ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನೀರು ನಿಲ್ಲುವ ರಸ್ತೆಗಳ
ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಬಾಣಸವಾಡಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳಿರುವುದು ಕಂಡು ಬಂದಿದೆ.
 
ಮಳೆ ಬಂದರೆ ರಸ್ತೆಗಳು ಕೊಚ್ಚೆ ಗುಂಡಿಗಳಂತಾಗಿದೆ. ಮೊನ್ನೆ ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕುತ್ತಿರುವ ಪ್ರದೇಶಗಳನ್ನು ಗುರುತಿಸಿ ರಸ್ತೆಗಳನ್ನು ಪತ್ತೆ ಹಚ್ಚಲಾಗಿದೆ. ಅಗತ್ಯ ಕ್ರಮ ಕೈಗೊಳ್ಳದೆ ಮಳೆ ನೀರು ಮತ್ತೆ ನುಗ್ಗಿದ್ದರಿಂದ ಭಾರಿ ನಷ್ಟವಾಗಿದೆ. ನೀರು ನುಗ್ಗಿರುವ ಒಂದೊಂದು ಮನೆಯದುಗೂ 30 ಸಾವಿರ ರೂ.ಗಳಿಗೂ ಹೆಚ್ಚು ನಷ್ಟು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
 
ಬಾಣಸವಾಡಿ ರಸ್ತೆಗಳ ಪರಿಸ್ಥಿತಿ ಅಧೋಗತಿದೆ ಇಳಿದಿದೆ. ಅಶೋಕ ನಗರ, ಹೆಬ್ಬಾಳ ಹಾಗೂ ಜೀವನ್ ಭೀಮಾನಗರ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಕೆಆರ್ ಪುರಂ, ಕೆಂಗೇರಿ, ಹಲಸೂರು ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಪಾಲಿಕೆ ಗುರುತಿಸಿದೆ. 
 
ಬೇಸಿಗೆಯಲ್ಲಿ ಸುರಿದ ಮಳೆಯಿಂದ ಅನಾಹುತದಿಂದ ಪಾಠ ಕಲಿತಿರುವ ಬಿಬಿಎಂಪಿ ಮಳೆಗಾಲ ಆರಂಭಕ್ಕೂ ಮುನ್ನ ಮಳೆ ಹಾವಳಿ ತಪ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ.
 
ಮಳೆಯ ಹಾವಳಿಯಿಂದ ಮುಂಗಾರಿಗೂ ಮುನ್ನ ನರಕವಾದ ಕಾಮಾಕ್ಯ ಬಡಾವಣೆ: 
 
ಮೊನ್ನೆ ಬಿದ್ದ ಮಳೆಯಿಂದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿನ್ನೆ ಸುರಿದ ಮಳೆಯೂ ಭಾರಿ ಅವಾಂತರ ಸೃಷ್ಟಿಸಿದೆ.ಬಡಾವಣೆಯ ಎಸ್‌.ಕೆ ಎಂಟರ್‌ಪ್ರೈಸಸ್‌ಗೆ ನೀರು ನುಗ್ಗಿದ ಪರಿಣಾಮ ಸಂಗ್ರಹಿಸಿಡಲಾಗಿದ್ದ ಮೆಡಿಕಲ್‌ ಕಿಟ್‌ಗಳು ನೀರುಪಾಲಾಗಿದ್ದು, ಮಾಲಿಕರಿಗೆ ಸುಮಾರು 20 ಲಕ್ಷ ನಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು?