Webdunia - Bharat's app for daily news and videos

Install App

ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ: ಸಿದ್ದರಾಮಯ್ಯರನ್ನು ಹೈಕ್ ರಾಮಯ್ಯ ಎಂದ ಬಿಜೆಪಿ

Sampriya
ಶನಿವಾರ, 18 ಜನವರಿ 2025 (20:01 IST)
ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಅಣಿಯಾಗಿರುವಾಗಲೇ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಬಿಜೆಪಿ ಟೀಕೆ ಮಾಡಿದೆ.

ಈ ಕುರಿತು ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ಅವರನ್ನು ಹೈಕ್ ರಾಮಯ್ಯ ಎಂದು ಟೀಕಿಸಿದೆ.

ರಾಜ್ಯದಲ್ಲಿ ಸಾರಿಗೆ ನಿಗಮಗಳಿಗೆ ಐಸಾ ಐಸಾ ಯೋಜನೆ ಕೊಟ್ಟು ಬಸ್‌ಗಳನ್ನು ತಳ್ಳುವಂತೆ ಮಾಡಿರುವ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ ಎಲ್ಲಾ ಹೈಕ್‌ ಹೈಕ್‌ ಎನ್ನುತ್ತಾ ಶೇ 48 ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಹೈಕ್‌ ರಾಮಯ್ಯ ಎನಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದೆ.

ಬಸ್‌ ಪ್ರಯಾಣವೂ ದುಬಾರಿ ಮೆಟ್ರೋ ಬಲು ದುಬಾರಿ ಆಗಿದೆ. ಜನರಿಗೆ ಅಕ್ಕಿಯನ್ನೂ ಕೊಡುತ್ತಿಲ್ಲ, ಗೃಹ ಲಕ್ಷ್ಮಿ ಹಣವನ್ನು ನೀಡುತ್ತಿಲ್ಲ. ದುಡಿದು ತಿನ್ನೋಣ ಎಂದರೆ ಎಲ್ಲಾ ದರವನ್ನು ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ ಎಂದು ಆರೋಪಿಸಿದೆ.

ನಮ್ಮ ಮೆಟ್ರೊ ಸಂಚಾರ ದರವನ್ನು ಶೇ 30ರಿಂದ 45ರವರೆಗೆ ಹೆಚ್ಚಿಸುವ ಬಗ್ಗೆ ಶುಕ್ರವಾರ ನಡೆದ ಬಿಎಂಆರ್‌ಸಿಎಲ್‌ ಮಂಡಳಿಯ ಆಂತರಿಕ ಸಭೆಯಲ್ಲಿ ಚರ್ಚೆ ನಡೆದಿದೆ.

ಪರಿಷ್ಕೃತ ದರದ ಬಗ್ಗೆ ಮಂಡಳಿಯ ಸದಸ್ಯರು ಅಥವಾ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ.

‘ದರ ಪರಿಷ್ಕರಣಾ ಸಮಿತಿಯ ಒಂದು ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಶಿಫಾರಸು ಯಥಾವತ್‌ ಜಾರಿ ಮಾಡಬೇಕಿಲ್ಲ. ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಪರಿಷ್ಕೃತ ದರ ಪ್ರಕಟಿಸಲಿದೆ. ಶಿಫಾರಸ್ಸನ್ನು ಪ್ರಮಾಣವನ್ನು ವ್ಯತ್ಯಾಸ ಮಾಡುವ ಅಧಿಕಾರ ಮಂಡಳಿಗೆ ಇದೆ’ ಎಂದು ಬಿಎಂಆರ್‌ಸಿಎಲ್‌ ಹೇಳಿದ್ದರು.

ರಾಜ್ಯದಲ್ಲಿ ಸಾರಿಗೆ ನಿಗಮಗಳಿಗೆ ಐಸಾ ಐಸಾ ಯೋಜನೆ ಕೊಟ್ಟು ಬಸ್‌ಗಳನ್ನು ತಳ್ಳುವಂತೆ ಮಾಡಿರುವ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ ಎಲ್ಲಾ ಹೈಕ್‌ ಹೈಕ್‌ ಎನ್ನುತ್ತಾ 48% ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಹೈಕ್‌ ರಾಮಯ್ಯ ಎನಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಂಬಕ್ಕೆ ಕಟ್ಟಿ ಯೋಧನ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪು, Viral Video

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸಚಿವರಿಂದ ಬಿಗ್ ಅಪ್ ಡೇಟ್

ಧರ್ಮಸ್ಥಳ ಮುಂದಿನ ತನಿಖೆ ಬಗ್ಗೆ ಸ್ಫೋಟಕ ವಿಚಾರ ಹಂಚಿಕೊಂಡ ಪರಮೇಶ್ವರ್‌

ಮಾಸ್ಕ್‌ಮ್ಯಾನ್ ಬಿಚ್ಚಿಟ್ಟ ಕಥೆಯನ್ನು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಪರಮೇಶ್ವರ್‌

ಧರ್ಮಸ್ಥಳದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ: ವಿಜಯೇಂದ್ರ ಆಗ್ರಹ

ಮುಂದಿನ ಸುದ್ದಿ
Show comments