Select Your Language

Notifications

webdunia
webdunia
webdunia
webdunia

ಮೇಕೆದಾಟು ಪಾದಯಾತ್ರೆ ಸಕಲ ಸಿದ್ದತೆ - ಡಿ. ಕೆ. ಶಿವಕುಮಾರ್

ಮೇಕೆದಾಟು ಪಾದಯಾತ್ರೆ ಸಕಲ ಸಿದ್ದತೆ - ಡಿ. ಕೆ. ಶಿವಕುಮಾರ್
ಬೆಂಗಳೂರು , ಬುಧವಾರ, 29 ಡಿಸೆಂಬರ್ 2021 (18:36 IST)
ಸದಾಶಿವನಗರದ ಕೆಪಿಸಿಸಿ ಕಚೇರಿಯಲ್ಲಿ ಮೇಕೆದಾಟು ಯೋಜನೆಯ ಪಾದಯಾತ್ರೆ ಅನುಷ್ಟಾನದ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಅಧ್ಯಕ್ಷರಾದ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಮತ್ತು ಇತರೆ ನಾಯಕರು ಭಾಗವಹಿಸಿದ್ದರು.
ಮೇಕೆದಾಟು ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಪಾದಯಾತ್ರೆ ಕುರಿತು ಮಾಹಿತಿ ನೀಡಿದರು.
 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ, ಯೋಜನೆ ಅನುಷ್ಠಾನದಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದರು. ಬರಗಾಲದ ಸಂದರ್ಭದಲ್ಲಿ ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳಿಗೆ ಕಾಲಕ್ಕೆ ಸರಿಯಾಗಿ ನೀರು ಬಿಡುಗಡೆ ಸಾಧ್ಯವಾಗಲಿದೆ ಎಂದರು. ಇನ್ನು ಕೆಆರ್ ಎಸ್ , ಕಬಿನಿ, ಹಾರಂಗಿ ಹಾಗೂ
 
ಹೇಮಾವತಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ಮೂಲಕ ಕಾವೇರಿ ಮಡಿಲಿನ ರೈತರಿಗೆ ಸಹಾಯಕವಾಗಲಿದೆ ಎಂದರು. ಹೀಗಾಗಿ ಇಂತಹ ಹೋರಾಟದಲ್ಲಿ ನಮ್ಮೊಂದಿಗೆ ಎಲ್ಲರೂ ಕೈಜೋಡಿಸಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ HM ರೇವಣ್ಣ, PR ರಮೇಶ್, ಡಿಕೆ ಸುರೇಶ್, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಡಾ. ಪುಷ್ಪಾ ಅಮರನಾಥ್, ಡಿಸಿಸಿ ಅಧ್ಯಕ್ಷರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಳೆ ಶಾಸ್ತ್ರ ಗಲಾಟೆ ಮಹಿಳೆಗೆ ಥಳಿತ