Publish Date: Wed, 09 Aug 2023 (18:41 IST)
Updated Date: Wed, 09 Aug 2023 (20:04 IST)
ಮಾಜಿ ಸಿಎಂ ಬಿಎಸ್ವೈ ಭೇಟಿ ಬಳಿಕ ಸಿಟಿ ರವಿ ಹಾಗೂ ಅಶ್ವಥ್ ನಾರಾಯಣ್ ರನ್ನ ಗುತ್ತಿಗೆದಾರರು ಭೇಟಿ ಮಾಡಿದ್ದಾರೆ.ಬಾಕಿ ಬಿಲ್ ಬಿಡುಗಡೆ ಹಾಗೂ ಡಿಸಿಎಂ ಡಿಕೆಶಿಯ 15 ಪರ್ಸೆಂಟ್ ಕಮಿಷನ್ ಬಗ್ಗೆ ಕಮಲ ನಾಯಕರಿಗೆ ದೂರು ನೀಡಿದ್ದಾರೆ.ಬಳಿಕ ಡಿಸಿಎಂ ಡಿಕೆಶಿಗೆ ಅಶ್ವಥ್ ನಾರಾಯಣ್ ಗೆ ಎಚ್ಚರಿಕೆ ನೀಡಿದ್ದಾರೆ.ಡಿಕೆ ಶಿವಕುಮಾರ್ ರವರೇ,ಕುಂಟು ನೆಪ ಹೇಳಿ ವಿನಾಕಾರಣ ವಿಳಂಬ ಧೋರಣೆ ತೋರದೇ ಕೂಡಲೇ ಗುತ್ತಿಗೆದಾರರ ಹಣವನ್ನು ಬಿಡುಗಡೆ ಮಾಡಿ.ಇಲ್ಲ ಅಂದರೆ ನಿಮ್ ವಿರುದ್ಧ ಹೋರಾಟ ಮಾಡಲು ಶತ ಸಿದ್ದ.ನಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು ಗುತ್ತಿಗೆದಾರರ ಪರವಾಗಿ ಹೋರಾಟ ಮಾಡಲು ಶತಸಿದ್ಧ ಎಂದು ಟ್ವಿಟರ್ ನಲ್ಲಿ ಮಾಜಿ ಸಚಿವ ಸಿ ಎನ್ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.