Publish Date: Mon, 03 Sep 2018 (19:40 IST)
Updated Date: Mon, 03 Sep 2018 (19:42 IST)
ಜೆಡಿಎಸ್ ನ ಮಾಜಿ ಶಾಸಕ ವೈಎಸ್ .ವಿ ದತ್ತಾ ಅವರ ನಿವಾಸಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಭೇಟಿ ನೀಡಿದರು.
ಮಾಜಿ ಶಾಸಕ ವೈಎಸ್.ವಿ ದತ್ತಾ ಅವರ ಪತ್ನಿ ದಿ. ನಿರ್ಮಲಾ ದತ್ತಾ ಅವರ ಶ್ರಾದ್ಧ ಕಾರ್ಯದಲ್ಲಿ ಹೆಚ್.ಡಿ ದೇವೇಗೌಡ್ರು ಭಾಗಿಯಾದರು.
ವೈಎಸ್.ವಿ ದತ್ತಾ ಅವರ ಯಗಟಿ ನಿವಾಸದಲ್ಲಿ ನಡೆಯುತ್ತಿರುವ ನಿರ್ಮಲಾ ದತ್ತಾ ಅವರ ಶ್ರಾದ್ಧ ಕಾರ್ಯ ಇದಾಗಿತ್ತು.
ಅನಾರೋಗ್ಯದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಈಚೆಗೆ ನಿರ್ಮಲಾ ದತ್ತಾ ನಿಧನರಾಗಿದ್ದರು. ವೈಎಸ್. ವಿ ದತ್ತಾ ಅವರ ಕುಟುಂಬಕ್ಕೆ ಸಾಂತ್ವನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ಹೇಳಿದರು.