Select Your Language

Notifications

webdunia
webdunia
webdunia
Thursday, 10 April 2025
webdunia

ಅಗಲಿದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ

ವಾಜಪೇಯಿ
ಮಂಡ್ಯ , ಗುರುವಾರ, 16 ಆಗಸ್ಟ್ 2018 (19:30 IST)
ಅಗಲಿದ ಮಾಜಿ ಪ್ರಧಾನಿ ವಾಜಪೇಯಿಗೆ ಬಿಜೆಪಿ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ, ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟಕ್ಕೆ ಕಾರಣವಾಗಿದೆ ಎಂದು  ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗಿದೆ.
ಇದಕ್ಕೂ ಮುನ್ನ ಮಂಡ್ಯ ನಗರದ ಕಾಳಿಕಾಂಭ ದೇವಾಲಯದಲ್ಲಿ ವಿಷೇಷ ಪೂಜೆ ಸಲ್ಲಿಕೆ ಮಾಡಲಾಯಿತು.

ಕವಿರತ್ನ ಕಾಳಿದಾಸನಿಗೆ ಬೋದಿರಾಜ ತನ್ನ ಆಯುಷ್ಯ ವನ್ನು ಧಾರೆ ಎರೆದಂತೆ ವಾಜಪೇಯಿ ಗೆ ತಮ್ಮ‌ ಅಯುಷ್ಯವನ್ನು ಬಿಜೆಪಿ ಕಾರ್ಯಕರ್ತರು ಧಾರೆ ಎರೆದರೂ ಹಿರಿಯ ಜೀವ ಅಗಲಿದ್ದಕ್ಕೆ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

ಕಾಳೀಕಾ ದೇವಿಗೆ ಪೂಜೆ ಸಲ್ಲಿಸಿ ವಾಜಪೇಯಿ ಅವ್ರಿಗೆ ಆಯುಷ್ಯ ಆರೋಗ್ಯ ದೊರಕಲೆಂದು ಪ್ರಾರ್ಥಿಸಿದ ಕೆಲವು ಸಮಯದಲ್ಲಿ ಅವರ ಅಗಲಿಕೆ ಸುದ್ದಿ ಕೇಳಿಬಂದಿದ್ದಕ್ಕೆ ಕಾರ್ಯಕರ್ತರು ದಿಗ್ಬ್ರಮೆಗೊಳಗಾದರು.



Share this Story:

Follow Webdunia kannada

ಮುಂದಿನ ಸುದ್ದಿ

ವಾಜಪೇಯಿ ನಿಧನ ಹಿನ್ನೆಲೆ; ತುರ್ತು ಸಭೆ ಕರೆದ ಪ್ರಧಾನಿ ಮೋದಿ