ಗುರುವಾರ ಸುರಿದ ಮಳೆಯಿಂದ ಸಿಲಿಕಾನ್ ಸಿಟಿಯ ಜನರು ಅಕ್ಷರಶಃ ತತ್ತರಿಸಿದಾರೆ . ಕಾಮಾಕ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಒಂದು ಕಡೆ ಅವಾಂತರ ಆದ್ರೆ ಮತ್ತೊಂದು ಕಡೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಡಿಕಲ್ ಕಿಟ್ ಗಳು ಸೇರಿದಂತೆ ಮೆಡಿಸನ್ ಕೊಳಚೆ ನೀರಿನಿಂದ ಸಂಪೂರ್ಣವಾಗಿ ನಾಶವಾಗೋಗಿದೆ.ಒಂದೊಂದು ಮನೆಯಲ್ಲಿಯೂ ಸುಮಾರು 30 ರಿಂದ 40 ಸಾವಿರದಷ್ಟು ನಷ್ಟವಾಗಿದೆ. ಇನ್ನು ಇತ್ತ ಎಸ್ ಕೆ ಎಂಟರ್ ಪ್ರೈಸಸ್ ನಲ್ಲಿ ಎಲ್ಲಾ ಮೆಡಿಕಲ್ ಕಿಟ್ ಗಳು ಮಳೆಯಿಂದ ಜಲಾವೃತ್ತವಾಗಿದ್ದು.ಸುಮಾರು 15 ರಿಂದ 20 ಲಕ್ಷ ಮೆಡಿಸನ್ ಐಟಮ್ಸ್ ಗಳು ಧ್ವಂಸವಾಗೋಗಿದೆ. ಹೀಗಾಗಿ ಮೆಡಿಕಲ್ ಔಷಧಿಗಳನ್ನ ಬಿಸಿಲಿನಲ್ಲಿಟ್ಟು ಒಣಗಿಸುತ್ತಿದ್ದಾರೆ. ಆದ್ರು ಔಷಧಿಗಳನ್ನ ಮತ್ತೆ ಉಪಯೋಗಿಸಲು ಸಾಧ್ಯವಾಗದ ಮಟ್ಟಿಗೆ ಆಧ್ವಾನವಾಗೋಗಿದೆ. ಹೀಗಾಗಿ ಮೆಡಿಕಲ್ ಕಂಪನಿಯ ಮಾಲೀಕ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತಾಗಿದಾನೆ. ಆದ್ರೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೇ ಬೇಜವಾಬ್ದಾರಿ ತವಾಗಿ ವರ್ತಿಸುತ್ತಿದ್ದಾರೆ.