Select Your Language

Notifications

webdunia
webdunia
webdunia
Saturday, 1 March 2025
webdunia

ಮೇಯರ್ ಪದ್ಮಾವತಿ ನೀಡಿದ 5 ಲಕ್ಷ ರೂ ಚೆಕ್ ಬೌನ್ಸ್

ಮೇಯರ್ ಪದ್ಮಾವತಿ ನೀಡಿದ 5 ಲಕ್ಷ ರೂ ಚೆಕ್ ಬೌನ್ಸ್
ಬೆಂಗಳೂರು , ಮಂಗಳವಾರ, 19 ಸೆಪ್ಟಂಬರ್ 2017 (15:14 IST)
ಬಿಬಿಎಂಪಿ ಮೇಯರ್ ಪದ್ಮಾವತಿ ಮರ ಬಿದ್ದು ಸಾವನ್ನಪ್ಪಿದ ಜಗದೀಶ್ ಪತ್ನಿ ರೂಪಾಗೆ ನೀಡಿದ್ದ 5 ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆ ಘಟನೆ ವರದಿಯಾಗಿದೆ.
ಮಳೆಯಿಂದ ಮರಬಿದ್ದು ಮೂವರು ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಪದ್ಮಾವತಿ ಎರಡು ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು.
 
ಒಂದು ಕಡೆ ಸಾಲಗಾರರ ಕಾಟ ಹೆಚ್ಚಾಗಿದೆ. ಮತ್ತೊಂದಡೆ ಬಿಬಿಎಂಪಿ ನೀಡಿದ ಚೌಕ್ ಬೌನ್ಸ್ ಆಗಿದೆ. ಬಾಡಿಗೆ ಕಟ್ಟೋಕೆ ದುಡ್ಡಿಲ್ಲ ಮಕ್ಕಳನ್ನು ಹೇಗೆ ಬೆಳಸೋದು? ಎಂದು ಮೃತ ಜಗದೀಶ್ ಪತ್ನಿ ರೂಪಾ ಕಣ್ಣೀರು ಹಾಕಿದ್ದಾರೆ.
 
ವಯಸ್ಸಾದ ಅತ್ತೆ ರಾಧಾ ಮತ್ತು ಮಾವ ಮಂಜುನಾಥ ಬಿಬಿಎಂಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪರಿಹಾರ ಹಣದ ಚೆಕ್ ತಡೆಹಿಡಿಯಲಾಗಿದೆ ಎಂದು ಮೇಯರ್ ಪದ್ಮಾವತಿ ಮಾಹಿತಿ ನೀಡಿದ್ದಾಗಿ ಮೃತ ಜಗದೀಶ ಪತ್ನಿ ರೂಪಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಿಂಗಾರೆಡ್ಡಿಗೆ ಸಂಸದೆ ಶೋಭಾ ಕರಂದ್ಲಾಜೆ ಸವಾಲ್