ಹಳೆ ವಿದ್ಯಾರ್ಥಿನಿಗೆ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೊ ಕಳುಹಿಸಿದ ಗಣಿತ ಶಿಕ್ಷಕ

ಗುರುವಾರ, 10 ಜನವರಿ 2019 (12:39 IST)
ಬೆಂಗಳೂರು : ಗಣಿತ ಶಿಕ್ಷಕನೊಬ್ಬ ಹಳೆ ವಿದ್ಯಾರ್ಥಿನಿಯೊಬ್ಬಳಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ.


ಮಂಡ್ಯ ಮೂಲದ ಚನ್ನೇಗೌಡ ವಿದ್ಯಾರ್ಥಿನಿಗೆ  ಬೆತ್ತಲೆ ಫೋಟೋ ಕಳುಹಿಸಿದ ಶಿಕ್ಷಕ. ವಿದ್ಯಾರ್ಥಿನಿ ತುಮಕೂರಲ್ಲಿ 9ನೇ ತರಗತಿಯಲ್ಲಿ ಓದುವ ವೇಳೆ ಚನ್ನೇಗೌಡ ಗಣಿತ ಪಾಠ ಹೇಳಿಕೊಡುತ್ತಿದ್ದರು. ನಂತರ ಯುವತಿ ಮದುವೆ ಆಗಿ ಬೆಂಗಳೂರಿನ ಗಂಡನ ಮನೆಯಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಚನ್ನೇಗೌಡ ಅದು ಹೇಗೋ ಯುವತಿ ಫೋನ್ ನಂಬರ್ ಪಡೆದು ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೋ ಕಳುಹಿಸಿ ಹೇಗಿದೆ ನೋಡಿ ಹೇಳು ಎಂದು ಮೆಸೇಜ್ ಮಾಡಿದ್ದಾನೆ.


ಈ ಮೆಸೇಜ್ ನೋಡಿದ ಯುವತಿ ತನ್ನ ಪತಿಗೆ ಈ ವಿಚಾರ ತಿಳಿಸಿ ಚನ್ನೇಗೌಡನ ವಿರುದ್ಧ ದೂರು ನೀಡಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ಚನ್ನೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೇಲ್ಜಾತಿಗೆ ಶೇ.10 ಮೀಸಲಾತಿ ವಿಚಾರ; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಬಿಎಸ್ ವೈ