ಮಾತಾ ಮಾಣಿಕೇಶ್ವರಿ ಮಾತೆಯ ದರ್ಶನ ಪಡೆದ ಭಕ್ತರು

ಶುಕ್ರವಾರ, 9 ನವೆಂಬರ್ 2018 (18:34 IST)
ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ  ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ  ಗುರುಮಠಕಲ್ ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು. ಮಾತಾಮಾಣಿಕೇಶ್ವರಿ ಮಾತಾ ಇದುವರೆಗೂ ಹೊರಗಡೆ ಬಂದು ಭಕ್ತರಿಗೆ ದರ್ಶನ ನೀಡಿದ್ದೇ ಎರಡನೇ ಬಾರಿ. ಒಮ್ಮೆ ಮಾತೆಯ ಸಹೋದರಿ ಲಿಂಗೈಕ್ಯರಾದಾಗ ಬಿಟ್ರೆ ಅವರು ತಮ್ಮ ಆಶ್ರಮದಿಂದ ಹೊರಗಡೆಗೆ ಬಂದಿದ್ದು ಇವತ್ತೇ ಅಂತೇ.

ಆದ್ದರಿಂದ ಯಾನಗುಂದಿ, ಗುರುಮಿಠಕಲ್ ಸುತ್ತಮುತ್ತಲಿನ ಭಕ್ತಾಧಿಗಳು ಮಾತೆಯ ದರ್ಶನ ಪಡೆದು ಖುಷಿಪಟ್ರು. ಮಾತಾ ಮಾಣಿಕೇಶ್ವರಿ ಮಾತೆಯ ಬಹುದಿನಗಳ ಕನಸು ಮಹಾರಾಷ್ಟ್ರದ ಪೆದ್ದಾ ಶಹಾಪೂರದಲ್ಲಿ ಅನಾಥ ಆಶ್ರಮ ಉದ್ಘಾಟನೆಯ ನಿಮಿತ್ಯ ಯಾನಗುಂದಿಯಿಂದ ಗುರುಮಠಕಲ್ ಗುಜುನೂರ್ ಮಾರ್ಗದ ಕಂಕಲ್, ಅನುಪುರ, ನಾರಾಯಣಪೇಟೆ, ಮಹಾರಾಷ್ಟ್ರದ ಮಾಹಿಬೂಬ್ಬ ನಗರ, ಜಾರ್ಚಲ, ಮಾರ್ಗದ ಮೂಲಕ ಹೈದರಾಬಾದ್ ನ ಪೆದ್ದ ಶಹಾಪೂರಕ್ಕೆ ಪ್ರಯಾಣ ಬೆಳೆಸಿದರು.

ದಾರಿಯುದ್ದಕ್ಕೊ ಮಾತಾಜೀ ತಲುಪುವ ಸ್ಥಳದವರೆಗೆ ಪೋಲಿಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಆಯಾ ಊರುಗಳಲ್ಲಿ ರಸ್ತೆ ಉದ್ದಕ್ಕೂ ನೀರು ಹಾಕಿ, ಮದುವಣಗಿತ್ತಿಯಂತೆ ಸಿಂಗರಸಿ ಪುಷ್ಪವೃಷ್ಟಿಯೊಂದಿಗೆ ಮಾತಾಜಿಗೆ ಸ್ವಾಗತ ನೀಡಲಾಯಿತು.  

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಾಡು ಹಗಲೇ ಜೂಜುಕೋರರ ಹಾವಳಿ