Webdunia - Bharat's app for daily news and videos

Install App

ಚಾಮರಾಜಪೇಟೆ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

Webdunia
ಶನಿವಾರ, 22 ಏಪ್ರಿಲ್ 2023 (19:40 IST)
​ ಮುಸಲ್ಮಾನರ ಪವಿತ್ರ ಹಬ್ಬ. ಒಂದು ತಿಂಗಳ ಕಾಲ ಉಪವಾಸ ಮಾಡಿ, ಆಚರಿಸೋ ಈ ಹಬ್ಬ, ತ್ಯಾಗ, ಬಲಿದಾನದ ಸಂಕೇತ. ಇಂದು ನಾಡಿನೆಲ್ಲೆಡೆ ಮುಸಲ್ಮಾನ ಭಾಂದವರು ರಂಜಾನ್​ ಹಬ್ಬ ಆಚರಿಸಿ ಸಂಭ್ರಮಿಸಿದ್ರು. ಒಂದೆಡೆ ಬಿಳಿ ಬಣ್ಣದ ಬಟ್ಟೆ ಧರಿಸಿ ಸಾಲಾಗಿ ಕುಳಿತ ಜನರು, ಮತ್ತೊಂದೆಡೆ ಹಬ್ಬದ ಖುಷಿಯಲ್ಲಿ ಹೊಸ ಬಟ್ಟೆಗಳನ್ನ ಧರಿಸಿ ಅಪ್ಪನ ತೋಳುಗಳಲ್ಲಿ ನಗುತ್ತಾ ನಮಾಜ್​ಗೆ ಆಗಮಿಸಿದ್ದ ಪುಟಾಣಿ ಮಕ್ಕಳು, ಚಾಮರಾಜಪೇಟೆ ಮೈದಾನದಲ್ಲಿ ನಡೆದ ರಂಜಾನ್​ ಸಾಮೂಹಿಕ ಪ್ರಾರ್ಥನೆಯಲ್ಲಿ ಕಂಡುಬಂದ ದೃಶ್ಯಗಳಿವು.ಕಳೆದ ಒಂದು ತಿಂಗಳಿನಿಂದ ರೋಜ ಅಂದ್ರೆ ಉಪವಾಸ ಮಾಡಿದ್ದ ಮುಸಲ್ಮಾನರು, ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸೋ ಮೂಲಕ ರಂಜಾನ್​ ಆಚರಿಸಿದ್ರು.ಚಾಮರಾಜಪೇಟೆ ಮೈದಾನದಲ್ಲಿ ಸೇರಿದ ಸಾವಿರಾರು ಜನರು ಅಲ್ಲಾನ ಪ್ರಾರ್ಥಿಸೋ ಮೂಲಕ ಹಬ್ಬ ಆಚರಿಸಿದ್ರು.

ಇನ್ನು ವಾಸ್ತವವಾಗಿ ಅರಬ್ ದೇಶಗಳಲ್ಲಿ ರಂಜಾನ್ ಹಬ್ಬದ ಆಚರಣೆಯ ಮೊದಲು ಚಂದ್ರ ಗೋಚರಿಸುತ್ತದೆ. ಅರಬ್ ದೇಶಗಳಲ್ಲಿ ಈದ್ ಆಚರಿಸಿದ ಒಂದು ದಿನದ ನಂತರ ಭಾರತದಲ್ಲಿ ರಂಜಾನ್ಆಚರಿಸಲಾಗುತ್ತದೆ.ರಂಜಾನ್ ದಿನದಂದು ಇಸ್ಲಾಂ ಧರ್ಮವನ್ನ ನಂಬುವ ಎಲ್ಲಾ ಜನರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸ್ತಾರೆ.ಅದರಂತೆ ಇಂದು ಪ್ರಾರ್ಥನೆ ಸಲ್ಲಿಸಿದ ಧರ್ಮಗುರುಗಳು, ನಾಡಿನ ಜನರೆಲ್ಲರೂ ಒಂದೇ, ಹಿಂದೂ-ಮುಸ್ಲಿಂ ಬೇಧ-ಬಾವ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿರಬೇಕು ಅಂತಾ ಸಂದೇಶ ನೀಡಿದ್ರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ಮೇಲೆ 50 ಶೇಕಡಾ ಸುಂಕದ ಬರೆ ಹಾಕಿದ ಡೊನಾಲ್ಡ್ ಟ್ರಂಪ್

ಭುವನೇಶ್ವರ: ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌: ಹೆದರಿ ಪೆಟ್ರೋಲ್ ಹಚ್ಚಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೆಲ್ಮೆಟ್ ಇಲ್ಲದೆ, ಪೆಟ್ರೋಲ್ ಇಲ್ಲ: ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ಸವಾರ ಮಾಡಿದ ಕಸರತ್ತು ವೈರಲ್

ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಡೀರ್ ಭೇಟಿ ಹಿಂದಿನ ಕಾರಣ ಇಲ್ಲಿದೆ

ಧರ್ಮಸ್ಥಳ: ನಿರ್ಣಾಯಕ ಘಟಕ್ಕೆ ತಲುಪುತ್ತಿರುವಾಗಲೇ ಮತ್ತೊಬ್ಬ ಅಪರಿಚಿತ ಎಂಟ್ರಿ

ಮುಂದಿನ ಸುದ್ದಿ
Show comments