Select Your Language

Notifications

webdunia
webdunia
webdunia
webdunia

ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಿದ್ದಾರೆ

ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಿದ್ದಾರೆ
bangalore , ಶುಕ್ರವಾರ, 21 ಏಪ್ರಿಲ್ 2023 (18:50 IST)
ಬಿಜೆಪಿಯಲ್ಲಿ 30, 40 ವರ್ಷಗಳಿಂದ ಇದ್ದವರು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ, ಬಿಜೆಪಿಯ ಅಂತರಿಕ ವಿಚಾರ ಹೊರಗೆ ಬರ್ತಿವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​​​ ಬಿಜೆಪಿ ವಿರುದ್ಧ ಕಿಡಿಕಾರಿದ್ರು.. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್​​​ ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಡಿಸಿಎಂ ಆಗಿದ್ದ ಲಕ್ಷ್ಮಣ್​​​​​ ಸವದಿ ಕೂಡ ಪಕ್ಷ ಸೇರಿದ್ದಾರೆ. ಇದಕ್ಕೆಲ್ಲಾ ಕಾರಣ ಬಿಜೆಪಿಯ ಆಂತರಿಕ ಬೆಳವಣಿಗೆ ಎಂದು ಆರೋಪಿಸಿದ್ರು.. ಇನ್ನು‌ ಬಹಳ ಜನ ಬಿಜೆಪಿಯಲ್ಲಿದ್ದೇ ನೋವು ಪಡ್ತಿದ್ದಾರೆ, ನಮ್ಮ ಜೊತೆ ಆನೇಕ ವಿಚಾರ ಹಂಚಿಕೊಳ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್ ಎಂದು ತಮ್ಮ ಪಕ್ಷದ ಕುರಿತು ಪರಮೇಶ್ವರ್​​ ಮೆಚ್ಚುಗೆ ವ್ಯಕ್ತಪಡಿಸಿದ್ರು.. ಇಡೀ ದೇಶಕ್ಕೆ ಕಾಂಗ್ರೆಸ್ ತನ್ನತನ ತೋರಿಸುತ್ತಿದೆ, ಕೆಲವೇ ದಿನಗಳಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ ಮನೆಗೆ ಹೋಗುತ್ತೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಎಲ್ಲರಿಗೂ ಗೊತ್ತಿದೆ.. ಅಂಥಹ ಎಲ್ಲರೂ ಕಾಂಗ್ರೆಸ್ ಕಡೆ ಮುಖಮಾಡಿದ್ದಾರೆ, ಬಿಜೆಪಿಯಲ್ಲಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆ ಎಂದು ಪರಮೇಶ್ವರ್​​ ಆರೋಪಿಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಸಿಎಂ ರೇಸ್​ನಲ್ಲಿ 10 ಜನರಿದ್ದಾರೆ