Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ನಯವಂಚಕ, ದಲಿತ ವಿರೋಧಿ

ಸಿದ್ದರಾಮಯ್ಯ ನಯವಂಚಕ, ದಲಿತ ವಿರೋಧಿ
mysooru , ಶುಕ್ರವಾರ, 21 ಏಪ್ರಿಲ್ 2023 (17:50 IST)
ಮಾಜಿ ಸಿಎಂ ಸಿದ್ದರಾಮಯ್ಯ ನಯವಂಚಕ ಮತ್ತು ದಲಿತ ವಿರೋಧಿ ಎಂದು ಬಿಜೆಪಿ MLC ಛಲವಾದಿ ನಾರಾಯಣ ಸ್ವಾಮಿ ಕಿಡಿ ಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 2006ರಲ್ಲಿ ದಲಿತ ಸಮುದಾಯ ಸಿದ್ದರಾಮಯ್ಯಗೆ ರಕ್ಷಣೆ ನೀಡಿದ್ದರು. ಆದರೆ ಸಿದ್ದರಾಮಯ್ಯರಿಂದಲೇ ದಲಿತ ನಾಯಕತ್ವ ಕೊನೆಯಾಯಿತು.
 
ಈ ಬಾರಿ ದಲಿತ ಸಮುದಾಯ ಸಿದ್ದರಾಮಯ್ಯರ ಕೈಹಿಡಿಯುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗಾಗಿ ದಲಿತರು ಪ್ರಾಣ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅದನ್ನು ಉಳಿಸಿಕೊಳ್ಳಲಿಲ್ಲ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮತ್ತು AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಮತ್ತು ಅವರ ಪಟಾಲಂ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದಿದ್ದರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಬೇಕಿತ್ತು.? ಯಾಕೆ ಚಾಮುಂಡೇಶ್ವರಿ ಬಿಟ್ಟು ವರುಣಾಗೆ ಬಂದರು? ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಧಾಕರ್​ ವಿರುದ್ಧ HDK ವಾಗ್ದಾಳಿ