Select Your Language

Notifications

webdunia
webdunia
webdunia
webdunia

ಈಶ್ವರಪ್ಪಗೆ ನರೇಂದ್ರ ಮೋದಿ ಮೊಬೈಲ್ ಕರೆ

ಈಶ್ವರಪ್ಪಗೆ ನರೇಂದ್ರ ಮೋದಿ ಮೊಬೈಲ್ ಕರೆ
Shivamogga , ಶುಕ್ರವಾರ, 21 ಏಪ್ರಿಲ್ 2023 (16:50 IST)
ಇತ್ತೀಚೆಗಷ್ಟೇ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಮಾಜಿ ಸಚಿವ K.S ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿ ಮೊಬೈಲ್​​​ ಕರೆಮಾಡಿದ್ದಾರೆ. ಕರೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಜೊತೆಗೆ ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆ. ಪಕ್ಷದ ಪರ ಕೆಲಸ ಮಾಡಿ ನೀವು ನಿಮ್ಮತನವನ್ನು ಮೆರೆದಿದ್ದೀರಿ. ಇದಕ್ಕೆ ಪಕ್ಷ ಯಾವಾಗಲೂ ನಿಮ್ಮ ಪರವಾಗಿರುತ್ತದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.. ಇತ್ತೀಚೆಗೆ ಟಿಕೆಟ್ ನೀಡಲಿಲ್ಲ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್​ಬೈ ಹೇಳಿದ್ರು. ಆದ್ರೆ K.S. ಈಶ್ವರಪ್ಪ ಮಾತ್ರ ಚುನಾವಣೆಯಿಂದ ಹಿಂದೆ ಸರಿದಿದ್ರು, ಪಕ್ಷದ ಪರ ನಿಂತಿದ್ರು. ಈ ಪಕ್ಷನಿಷ್ಠೆ ಮೆಚ್ಚಿದ ಮೋದಿ‌ಯವರು ಈಶ್ವರಪ್ಪಗೆ ಕರೆಮಾಡಿ ಶಹಬ್ಬಾಶ್ ಗಿರಿ ಹೇಳಿದ್ದು, ಪಕ್ಷದ ಪರ ಕೆಲಸ ಮಾಡಿ ನಿಮಗೆ ಪಕ್ಷ ಎಲ್ಲವನ್ನು ನೀಡುತ್ತೆ ಎಂದು‌ ಆಶ್ವಾಸನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯಕ್ಕೆ ಅಮಿತ್​ ಶಾ ಎಂಟ್ರಿ