Publish Date: Fri, 21 Apr 2023 (16:00 IST)
Updated Date: Fri, 21 Apr 2023 (16:18 IST)
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿಅಭ್ಯರ್ಥಿಗಳ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದೆ. ಚುನಾವಣಾಧಿಕಾರಿ ಸಂತೋಷ್ ಹಾಗೂ ಚುನಾವಣಾ ವೀಕ್ಷಕ ಜಿ.ಎಸ್ ಪಾಂಡ ದಾಸ್ ನೇತೃತ್ವದಲ್ಲಿ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದೆ. ಕನಕಪುರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಡಿಕೆಶಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಈ ಮೂಲಕ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಇನ್ನೊಂದೆಡೆ ಸಂಸದ ಡಿ.ಕೆ ಸುರೇಶ್ ನಾಮಪತ್ರವನ್ನು ಸಲ್ಲಿಸಿದ್ರು. ಇದೀಗ ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರವಾಗಿದ್ದರಿಂದ, ಸಹೋದರ ಡಿ.ಕೆ ಸುರೇಶ್ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ.