Publish Date: Fri, 21 Apr 2023 (18:20 IST)
Updated Date: Fri, 21 Apr 2023 (18:34 IST)
ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯುತ್ತಿದೆ. ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದೆ. ನಾಮಪತ್ರ ಪರಿಶೀಲನೆ ವೇಳೆ ನಾಲ್ವರಿಗೆ ಮಾತ್ರ ಹಾಜರಿರಲು ಅವಕಾಶ ನೀಡಲಾಗಿದೆ. ನಾಮಪತ್ರ ಪರಿಶೀಲನೆ ವೇಳೆ ಖುದ್ದು ಅಭ್ಯರ್ಥಿಯೇ ಹಾಜರಾಗಬಹುದು. ಅಲ್ಲದೇ ಅಭ್ಯರ್ಥಿ ನೇಮಕ ಮಾಡಿಕೊಂಡಿರುವ ಚುನಾವಣಾ ಏಜೆಂಟ್ ಕೂಡಾ ಭಾಗಿಯಾಗಬಹುದು.