Select Your Language

Notifications

webdunia
webdunia
webdunia
webdunia

ಮಂಗಳೂರು: ತಂಗಿಯ ಗಂಡನ ಪಿಂಡ ಪ್ರದಾನಕ್ಕೆ ಸಮುದ್ರಕ್ಕಿಳಿದ ಮಹಿಳೆ ಸಾವು

Someshwar Beach, Karnataka Dangerous Top Beach, Malpe Beach

Sampriya

ಮಂಗಳೂರು , ಸೋಮವಾರ, 16 ಡಿಸೆಂಬರ್ 2024 (20:03 IST)
ಮಂಗಳೂರು: ಸೋಮೇಶ್ವರ ಕಡಲ ತೀರದಲ್ಲಿ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತರನ್ನು ದೇರೆಬೈಲ್ ನಿವಾಸಿ ಉಷಾ (72) ಎಂದು ಗುರುತಿಸಲಾಗಿದೆ.  ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡು ಸಮುದ್ರಕ್ಕೆ ಸ್ನಾನಕ್ಕಿಳಿದಿದ್ದರು.

ಇತ್ತೀಚೆಗೆ ತಂಗಿ ನಿಶಾ ಭಂಡಾರಿ ಅವರ ಪತಿ ಕರುಣಾಕರ ಭಂಡಾರಿ ನಿಧನರಾಗಿದ್ದರು. ಮೃತ ಕರುಣಾಕರ ಭಂಡಾರಿಯ ಪಿಂಡ ಪ್ರದಾನ ವಿಧಿಯಲ್ಲಿ ಉಷಾ ಭಾಗವಹಿಸಿದ್ದರು. ಪುರೋಹಿತರು ಸಮುದ್ರ ತೀರದಲ್ಲಿ ಪಿಂಡ ಪ್ರದಾನ ನೆರವೇರಿಸಿದ ಬಳಿಕ ಮಹಿಳೆ ಸಮುದ್ರಕ್ಕೆ ಇಳಿದಿದ್ದರು. ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.

ಮಹಿಳೆ ರಕ್ಷಣೆಗೆ ಸ್ಥಳೀಯರು ಮತ್ತು ನಾಡದೋಣಿ ಮೀನುಗಾರರು ಮುಂದಾದರು. ಆದರೆ, ಸಮುದ್ರದಲ್ಲಿ ಮುಳುಗಿ ಮಹಿಳೆ ಮೃತಪಟ್ಟಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶರಣಾಗಲು ಒಪ್ಪದೆ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು