Select Your Language

Notifications

webdunia
webdunia
webdunia
webdunia

ಶರಣಾಗಲು ಒಪ್ಪದೆ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು

ಅತ್ತಿಬೆಲೆ ಪೊಲೀಸ್ ಠಾಣೆ,  ರೌಡಿ ಮೇಲೆ ಗುಂಡೇಟು, ರೌಡಿಶೀಟರ್ ಲೋಕೇಶ್‌

Sampriya

ಬೆಂಗಳೂರು , ಸೋಮವಾರ, 16 ಡಿಸೆಂಬರ್ 2024 (19:47 IST)
Photo Courtesy X
ಬೆಂಗಳೂರು: ಶರಣಾಗಲು ಒಪ್ಪದೆ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಮೇಲೆ ಗುಂಡಿಕ್ಕಿದ ಘಟನೆ ಇಂದು ಬೆಳಗ್ಗೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ 40 ವರ್ಷದ ಲೋಕೇಶ್ ಇರುವ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಲೋಕೇಶ್ ಗೆ ಶರಣಾಗುವಂತೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಅಡ್ಡಬಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಆತ್ಮರಕ್ಷಣೆಯಾಗಿ ಪೊಲೀಸರು ಲೋಕೇಶ್ ನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸದ್ಯ ಗಾಯಗೊಂಡಿರುವ ಆರೋಪಿ ಲೋಕೇಶ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಅಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಲೋಕೇಶ್ ಮತ್ತು ಆತನ ಸಹಚರರು ಮತ್ತೊಬ್ಬ ರೌಡಿಶೀಟರ್ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿಯೂ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಕ್ಕೆಂದು ಸುವರ್ಣಸೌಧಕ್ಕೆ ಬಂದ ಮಕ್ಕಳಿಗೆ ಅನುಭವ ಮಂಟಪದ ಬಗ್ಗೆ ಖುದ್ದು ವಿವರಿಸಿದ ಸಿಎಂ