Select Your Language

Notifications

webdunia
webdunia
webdunia
webdunia

ಮಸೀದಿ ಎದುರು ಮಂಗಳಾರತಿ,ಹಿಂದೂ ಕಾರ್ಯಕರ್ತರ ವಿರುದ್ದ FIR

ಹಿಂದೂ ಕಾರ್ಯಕರ್ತ
ಶಿವಮೊಗ್ಗ , ಮಂಗಳವಾರ, 3 ಅಕ್ಟೋಬರ್ 2023 (19:53 IST)
ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂಭಾಗ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಮಹಾತ್ಮಗಾಂಧಿ ವೃತ್ತದ ಬಳಿಯ ಜಾಮೀಯ ಮಸೀದಿ ಮುಂಭಾಗ ಗಣೇಶಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕೆಲ ಪ್ರಮುಖರು ಮಸೀದಿ ಮುಂಭಾಗವೇ ನಿಂತು ಮಂಗಳಾರತಿ ಮಾಡಿ, 'ಜೈ ಶ್ರೀರಾಮ್' ಎಂದೂ ಘೋಷಣೆ ಕೂಗಿದ್ದರು. ಇದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ಎಂದಿರುವ ಪೊಲೀಸರು, ಇದಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಐವರು ಮತ್ತು ಇತರರ ವಿರುದ್ಧ ಸ್ವಯಂ ಪ್ರೇರಿತಚವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ,ಪರಮೇಶ್ವರ್ ಮೇಲೆ ಶೋಭಾ ಕಂದ್ಲಾಜೆ ಕೆಂಡಾಮಂಡಲ