Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ 52 ಜನರ ಸಾವು..!

ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ 52 ಜನರ ಸಾವು..!
ಪಾಕಿಸ್ತಾನ , ಶನಿವಾರ, 30 ಸೆಪ್ಟಂಬರ್ 2023 (18:46 IST)
ಪಾಕಿಸ್ತಾನದ ಕರಾಚಿಯ ಬಳಿ ಮಸೀದಿಯೊಂದರ ಸಮೀಪ ಬಾಂಬ್‌ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 52 ಜನ ಮೃತಪಟ್ಟಿದ್ದು, 130ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಈದ್ ಮಿಲಾ-ದುನ್- ನಬಿ ಆಚರಿಸಲು ಹಾಗೂ ಪ್ರಾರ್ಥನೆಯ ಸಲುವಾಗಿ ಜನ ಸೇರಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ.  ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ  ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಈ ದುರಂತ ನಡೆದಿದೆ. ಮಸ್ತುಂಗ್ ನಗರದ ಸ್ಟೇಷನ್ ಹೌಸ್ ಆಫೀಸರ್ ಮೊಹಮ್ಮದ್ ಜಾವೇದ್ ಲೆಹ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸ್ಫೋಟವು ಆತ್ಮಹತ್ಯಾ ದಾಳಿಯಿಂದ ಸಂಭವಿಸಿದೆ. ಆತ್ಮಾಹುತಿ ಬಾಂಬರ್‌  ಡಿಎಸ್‌ಪಿಯ ಕಾರಿನ ಪಕ್ಕದಲ್ಲೇ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು  ಅವರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಬೆಂಕಿ ಅವಘಡ..!