Webdunia - Bharat's app for daily news and videos

Install App

ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಚಿನ್ನ ಕದ್ದಿದ್ದ ಮ್ಯಾನೇಜರ್ ಬಂಧನ..

Webdunia
ಗುರುವಾರ, 19 ಜನವರಿ 2023 (17:04 IST)
ಬೇಲಿಯೇ ಎದ್ದು ಹೊಲ ಮೆಯ್ದಂತೆ ಎನ್ನುವ ಹಾಗೇ‌ ನಂಬಿಕೆ ಮೇರೆಗೆ ಸಾರ್ವಜನಿಕರೊಬ್ಬರು ಮಣಪ್ಪುರಂ ಗೋಲ್ಡ್ ಫೈನ್ಸಾನ್ ನಲ್ಲಿ‌ ಅಡ ಇಟ್ಟಿದ್ದ ಚಿನ್ನಾಭರಣ ಕದ್ದಿದ್ದ ಮ್ಯಾನೇಜರ್ ನನ್ನ ನಂದಿನಿ ಲೇಔಟ್ ಪೊಲೀಸರು ಸೆರೆಹಿಡಿದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಆಡಲು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಸುಮಾರು 40 ಗ್ರಾಂ ಚಿನ್ನ ಎಗರಿಸಿ‌ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ‌. 25 ವರ್ಷದ ಸಿದ್ದೇಶ್ ಬಂಧಿತ ಮ್ಯಾನೇಜರ್. ತುಮಕೂರು ಮಧುಗಿರಿ ಮೂಲದ ಸಿದ್ದೇಶ್, ನಂದಿನಿ‌ ಲೇಔಟ್ ನಲ್ಲಿ ವಾಸವಾಗಿದ್ದ. ಕಳೆದ ಎರಡೂವರೆ ವರ್ಷಗಳಿಂದ ಮ್ಯಾನೇಜರ್ ಆಗಿ ಮಲ್ಲೇಶ್ವರ ಬ್ರಾಂಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದ. ಕ್ರಿಕೆಟ್ ಬೆಟ್ಟಿಂಗ್  ಆಡುವ ಚಟ ಹೊಂದಿದ್ದ ಸಿದ್ದೇಶ್, ಜೂಜು ಆಡಿ‌ ಸೋತಿದ್ದ. ಸಾಲ ತೀರಿಸಲು ಉಪಾಯ ಹೂಡಿ, ತಾನು ಕೆಲಸ‌ ಮಾಡುತ್ತಿದ್ದ ಬ್ರಾಂಚ್ ನಲ್ಲಿ ಗ್ರಾಹಕರೊಬ್ಬರು ಇರಿಸಿದ್ದ 40 ಗ್ರಾಂ ಚಿನ್ನ ಕದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಅಲ್ಲದೆ ಆಡಿಟಿಂಗ್ ವೇಳೆ 40 ಗ್ರಾಂ ಚಿನ್ನ ವ್ಯತ್ಯಾಸ ಅಗಿರುವುದು ಕಂಡು ಬಂದಿತ್ತು. ಪರಿಶೀಲನೆ ನಡೆಸಿದಾಗ ಬ್ರಾಂಚ್ ಮ್ಯಾನೇಜರ್ ಕೈ ಚಳಕವಿರುವುದು ಗೊತ್ತಾಗಿತ್ತು‌. ಈ ಸಂಬಂಧ ಮಣಪ್ಪುರಂ ಫೈನಾನ್ಸ್ ಕಚೇರಿಯ ಆಡಳಿತ ಮಂಡಳಿ ನೀಡಿದ‌ ದೂರಿನ‌ ಮೇರೆಗೆ ದೊಡ್ಡಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಮ್ಯಾನೇಜರ್ ನನ್ನ ಬಂಧಿಸಲಾಗಿದೆ.ಮ್ಯಾನೇಜರ್ ಕಳ್ಳತನ ಮಾಡಿದ್ದು‌ ಇದೇ‌‌ ಮೊದಲಲ್ಲ..‌ಈ ಹಿಂದೆ ಚಿನ್ನಾಭರಣ‌ ಕದ್ದಿದ್ದಂತೆ.‌ ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಮ್ಯಾನೇಜರ್ ಲಕ್ಷಾಂತರ ರೂಪಾಯಿ ಹಣವನ್ನ‌ ಕಳೆದುಕೊಂಡಿದ್ದ. ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಚಿನ್ನವನ್ನ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನುಷ್ಯನ ಎಲ್ಲಾ ಖಾಯಿಲೆಗಳಿಗೆ ಇದೊಂದೇ ಔಷಧ ಸಾಕು ಅಂತಾರೆ ಡಾ ಸಿಎನ್ ಮಂಜುನಾಥ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನೀವು ಹೇಳಿದಂಗೆಲ್ಲಾ ಕೇಳಕ್ಕಾಗಲ್ಲ: ಡೊನಾಲ್ಡ್ ಟ್ರಂಪ್ ಗೆ ಬೆಂಕಿಯಂತಹ ಉತ್ತರ ಕೊಟ್ಟ ಭಾರತ

ಬೆಂಬಲಿಗರ ಜೊತೆ ಬರ್ತ್ ಡೇ ಕೇಕ್ ಕತ್ತರಿಸುದ್ದ ಪ್ರಜ್ವಲ್ ರೇವಣ್ಣಗೆ ಇಂದು ಯಾರೂ ಇಲ್ಲ

ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಭಾರತ ಹಣ: ಟ್ರಂಪ್ ಆರೋಪಕ್ಕೆ ತಕ್ಕ ಎದಿರೇಟು ಕೊಟ್ಟ ಭಾರತ

ಮುಂದಿನ ಸುದ್ದಿ
Show comments