Publish Date: Mon, 28 Sep 2020 (09:49 IST)
Updated Date: Mon, 28 Sep 2020 (09:52 IST)
ಚಿತ್ರದುರ್ಗ : ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಹೆಣ್ಣುಮಗುವನ್ನು ಮಾಂತ್ರಿಕನೊಬ್ಬ ಬೆತ್ತದಿಂದ ಹೊಡೆದು ಕೊಂದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಜ್ಕಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗು ಪದೇ ಪದೇ ಬೆಚ್ಚಿ ಬೀಳುತ್ತಿದ್ದ ಹಿನ್ನಲೆಯಲ್ಲಿ ಊರಿನ ಮಂತ್ರವಾದಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಆ ಮಂತ್ರವಾದಿ ಮಗುವಿಗೆ ದೆವ್ವ ಹಿಡಿದಿದೆ ಎಂದು ಎಕ್ಕೆಗಿಡದ ಬೆತ್ತದಿಂದ ಹೊಡೆದಿದ್ದಾನೆ. ಇದರ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ತಕ್ಷಣ ಪೋಷಕರಿಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಹೇಳಿ ಮಂತ್ರವಾದಿ ಪರಾರಿಯಾಗಿದ್ದಾನೆ. ಆದರೆ ಮಗು ಮೃತಪಟ್ಟಿರುವುದು ತಿಳಿಸ ಪೋಷಕರು ಮಂತ್ರವಾದಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.