Publish Date: Mon, 27 Aug 2018 (18:23 IST)
Updated Date: Mon, 27 Aug 2018 (18:25 IST)
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ್ದಾರೆ. 99 ವರುಷದ ಶ್ರೀಗಳು ಇಂದು ಬೆಳಗ್ಗೆ ಲಿಂಗೈಕ್ಯರಾದರು.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ದಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದರು. ಆ.28ರ ಮಧ್ಯಾಹ್ನ 12 ಗಂಟೆಗೆ ಕೂಡ್ಲಿಗಿ ಹಿರೇಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶದಲ್ಲಿ ಕಳೆದ ಆರು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಾಗಿ ಸ್ವಾಮೀಜಿ ಬಹುವಾಗಿ ಶ್ರಮಿಸಿದವರು. ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮನೆಗೆ ಭಿಕ್ಷೆ ಬೇಡಿ ಶಿಕ್ಷಣಸಂಸ್ಥೆ ಕಟ್ಟಿದವರು. ಅವರ ಅಗಲಿಕೆ ವಿದ್ಯಾರ್ಥಿಗಳು, ಭಕ್ತರು, ಜನರಲ್ಲಿ ತೀವ್ರ ನೋವು ತಂದಿದೆ.