ಬೆಂಗಳೂರು-ಲೋಕಸಭೆಯ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರಿಂದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದ್ದು, ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ ಎರಡು ಪ್ರತ್ಯೇಕ ಸಭೆ ನಡೆಸಲಾಗಿದೆ.ಒಂದು ಕಡೆ ಹಳೆ ಮೈಸೂರು ಭಾಗದ ಒಕ್ಕಲಿಗರ ನಾಯಕರು ಸಭೆ ನಡೆಸದಿದ್ದು, ಇನ್ನೊಂದು ಕಡೆ ಕಲ್ಬುರ್ಗಿ ಕಾಂಗ್ರೆಸ್ ನಾಯಕರ ಸಭೆ ಕೂಡ ನಡೆಸಲಾಗುತ್ತಿದೆ.ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ನಾಯಕರು ರಣತಂತ್ರ ನಡೆಸುತ್ತಿದ್ದು ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ ನಾಯಕರು ಎರಡು ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಾಯಕರಿಂದ ಚುನಾವಣೆಯ ಚರ್ಚೆ ನಡೆದಿದೆ. ಅಲ್ಲದೆ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕಾ ಅಥವಾ ಅವರ ಅಳಿಯ ರಾಧಾಕೃಷ್ಣರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾ ಎಂದು ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ