Select Your Language

Notifications

webdunia
webdunia
webdunia
webdunia

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ-ಡಿಕೆಶಿ

ಡಿಕೆ ಶಿವಕುಮಾರ್

geetha

bangalore , ಶುಕ್ರವಾರ, 16 ಫೆಬ್ರವರಿ 2024 (18:00 IST)
ಬೆಂಗಳೂರು- ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 
ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾರೆ.ಮೂರು ಅಭ್ಯರ್ಥಿಗಳು ಆಯ್ಕೆಯಾಗಿ, ರಾಜ್ಯಸಭೆ ಹೋಗಿ ರಾಜ್ಯಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ಇನ್ನೂ ಕುಪೇಂದ್ರ ರೆಡ್ಡಿ ಸ್ಪರ್ಧೆ ವಿಚಾರವಾಗಿ ಅವರು ಪ್ರಯತ್ನ ಮಾಡ್ತಾರೆ, ಅವರ ಪ್ರಯತ್ನ ಅವರು ಮಾಡ್ಲಿ ನಮ್ಮ ಒಗ್ಗಟ್ಟಿನ ಪ್ರದರ್ಶನ ನಾವು ಏನು ರಾಜಕಾರಣ ಮಾಡಬಹುದು.27ತಾರೀಖು ಏನಾಗುತ್ತೆ ಅಂತ ನೋಡ್ತಿರಿ.
 
ಇನ್ನೂ ಕಾಂಗ್ರೆಸ್ ನಿಂದ ಅಡ್ಡ ಮತದಾನ ಸಂಸ್ಕೃತಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಜೆಡಿಎಸ್ ವಿಫಲ ಆಗಿರುವುದಕ್ಕೆ ಬಿಜೆಪಿ ಜೊತೆಗೆ ಹೋಗಿದೆ.ಒಟ್ಟಿಗೆ ಸೇರಿ ಹೊಸ  ನೆಂಟಸ್ತಿಕೆ ಮಾಡ್ತಿದೆ.ಅಲ್ಲಿರುವಂತವರು ಅವರ ಆತ್ಮಸಾಕ್ಷಿ ಮತವನ್ನು ನಮಗೆ ಕೊಡ್ತಾರೆ ಎಂಬ ಭರವಸೆ ಇದೆ.ಎಷ್ಟು ಮತ ಮತದಾನ ಆದ ಬಳಿಕ‌ ತಿಳಿಸುತ್ತೇವೆ.ಅಜಯ್ ಮಕೇನ್ ಆಯ್ಕೆಗೆ ಆಕ್ಷೇಪ ವಿಚಾರವಾಗಿ ಅದನ್ನು ನೀವು ಬಿಜೆಪಿ ಬಳಿ ಕೇಳಬೇಕು.ಬಿಜೆಪಿ ಜೆಡಿಎಸ್ ನವರು ಹಿಂದೆ ಕರೆದುಕೊಂಡು ಬಂದು ಕಣಕ್ಕೆ‌ ಇಳಿಸಿದ್ದಾರೆ ಅಲ್ವಾ..?ಅವರನ್ನು ಕೇಳಿ (ಅಜಯ್ ಮುಕೇನ್ ) ಈ ಕುಟುಂಬ, ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬ .ದೇಶದ ಐಕ್ಯತೆ, ಶಾಂತಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದೆ.ವಿದ್ಯಾರ್ಥಿ ನಾಯಕನಿಂದ ಹಿಡಿದು ದೆಹಲಿಯವರೆ ಸಂಘಟನೆ ಮಾಡಿದ್ದಾರೆ.ನಮ್ಮ ಪಕ್ಷಕ್ಕೆ ಅಜಯ್ ಮಕೇನ್ ಆಧಾರ ಸ್ಥಂಭ ಅದಕ್ಕಾಗಿ ನಾವು ಆಯ್ಕೆ ಮಾಡಿದ್ದೆವೇ ಬಹಳ ಸಂತೋಷದಿಂದ ಈ ಅವಕಾಶ ಕಲ್ಪಿಸುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಎಲ್ಲಾ ಸದಸ್ಯರ ಬಳಿ ಕ್ಷಮೇ ಕೇಳಬೇಕು-ಕೋಟಾ ಶ್ರೀನಿವಾಸ್ ಪೂಜಾರಿ