Select Your Language

Notifications

webdunia
webdunia
webdunia
webdunia

‘ನನ್ನನ್ನೇ 5 ವರ್ಷ ಮುಖ್ಯಮಂತ್ರಿ ಮಾಡಿ’

‘ನನ್ನನ್ನೇ 5 ವರ್ಷ ಮುಖ್ಯಮಂತ್ರಿ ಮಾಡಿ’
bangalore , ಬುಧವಾರ, 17 ಮೇ 2023 (17:03 IST)
ಚುನಾವಣೆಯ ಸಮಯದಲ್ಲಿ ಮತದಾರರಿಗೆ ʼಗ್ಯಾರಂಟಿ ಯೋಜನೆʼಯ ಭರವಸೆ ನೀಡಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಈಗ ʼಗ್ಯಾರಂಟಿ ಸಿಎಂʼ ಹುದ್ದೆ ನೀಡುವಂತೆ ಹೈಕಮಾಂಡ್‌ ಮುಂದೆ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್‌ ಇಬ್ಬರನ್ನೂ ಸಮಾಧಾನ ಪಡಿಸಲು ತಂತ್ರಗಳನ್ನು ಹೆಣೆಯುತ್ತಿದ್ದರೂ ಇಬ್ಬರೂ ಮೊದಲ ಅವಧಿಗೆ ನನ್ನನ್ನೇ ಸಿಎಂ ಮಾಡಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ. ವಿವಿಧ ಭಾಗ್ಯಗಳನ್ನು ನೀಡಿದ್ದ ಕಾಂಗ್ರೆಸ್‌ ಈಗ ಯಾರಿಗೆ ʼಗ್ಯಾರಂಟಿ ಸಿಎಂʼ ಭಾಗ್ಯ ನೀಡುತ್ತದೆ ಎನ್ನುವುದೇ ಸದ್ಯದ ಕುತೂಹಲ. ಡಿಕೆಶಿಯ ಈ ಸೂತ್ರವನ್ನು ನಾನು ಒಪ್ಪುವುದಿಲ್ಲ. ಮಾಡುವುದಾದರೇ ನನ್ನನ್ನೇ ಮೊದಲು ಸಿಎಂ ಮಾಡಿ. ನಾನು ಕೂಡ ಒಪ್ಪಂದಕ್ಕೆ ಸಿದ್ದನಿದ್ದು, ಈ ವಿಚಾರವನ್ನು ನಾನು ಈ ಮೊದಲೇ ತಿಳಿಸಿದ್ದೇನೆ. ಇದು ಸಾಧ್ಯವಾಗದೇ ಇದ್ದರೆ ನನ್ನನ್ನೇ 5 ವರ್ಷವೂ ಸಿಎಂ ಆಗಿ ಮುಂದುವರಿಸಿ. ಎರಡು, ಮೂರು ವರ್ಷ ಎಂದು ಹೇಳಿ ಗೊಂದಲ ಸೃಷ್ಟಿಸಬೇಡಿ. ಗೊಂದಲ, ಅನಿಶ್ಚಿತತೆಯಲ್ಲಿ ಸಿಎಂ ಆಯ್ಕೆ ಮಾಡುವುದು ಸರಿಯಲ್ಲ. ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇದು ನನ್ನ ಕೊನೆಯ ಚುನಾವಣೆಯಾಗಿರುವುದರಿಂದ ಸಿಎಂ ರೇಸ್‍ನಿಂದ ನನ್ನನ್ನು ಹಿಂದೆ ಸರಿಯಲು ಹೇಳಬೇಡಿ ಎಂದು ಸಿದ್ದರಾಮಯ್ಯ ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

24ನೇ ಸಿಎಂ ಆಗಿ ಸಿದ್ದರಾಮಯ್ಯ ‌ಪ್ರಮಾಣ ವಚನ ಸ್ವೀಕಾರ ಸಾಧ್ಯತೆ