Publish Date: Wed, 17 May 2023 (12:38 IST)
Updated Date: Wed, 17 May 2023 (12:58 IST)
ಇಂದು ಸಿಎಂ ಆಯ್ಕೆ ಪೈನಲ್ ಆಗಲಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಘೋಷಣೆ ಬಹುತೇಕ ಖಚಿತವಾಗಿದೆ.ಈ ಹಿನ್ನೆಲೆ ಶಿವಾನಂದ್ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಸಂಭ್ರಮ ಮುಗಿಲುಮಟ್ಟಿದೆ.ಸಿದ್ದು ಅಭಿಮಾನಿಗಳಿಂದ ಸಿಹಿ ಹಂಚಿ ಸಂಭ್ರಮಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂಧನೆಗಳು ಎಂದು ಬ್ಯಾನರ್ ಅಳವಡಿಕೆ ಸಹ ಮಾಡಲಾಗಿದೆ.
ಬಹುತೇಕ ಸಿ ಎಂ ಸ್ಥಾನಕ್ಕೆ ಸಿದ್ದರಾಮಯ್ಯ ಖಚಿತ ಹಿನ್ನೆಲೆ ಕೆ ಪಿ ಸಿ ಸಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗಿದೆ.ದಲಿತ ನಾಯಕನನ್ನ ಸಿ ಎಂ ಮಾಡಬೇಕಾಗಿ ಹೈಕಮಾಂಡ್ ಗೆ ದಲಿತ ಸಂಘರ್ಷ ಸಂಘಟನೆ ಮನವಿ ಮಾಡಿದೆ.ಕೆ ಪಿ ಸಿಸಿ ಕಛೇರಿ ಮುಂದೆ ಹೈಕಮಾಂಡ್ ಗೆ ಮನವಿ ಮಾಡಿದ್ದು,ಪರಮೇಶ್ವರ್ ಇಲ್ಲವೇ ಮಲ್ಲಿಕಾರ್ಜುನ ಖರ್ಗೆ ಯನ್ನ ಸಿ ಎಂ ಮಾಡುವುದಾಗಿ ಮನವಿ ಸಹ ಮಾಡಲಾಗಿದೆ.