Select Your Language

Notifications

webdunia
webdunia
webdunia
webdunia

ಚಿನ್ನದಂತ ಕ್ಷೇತ್ರ ಹೈಕಮಾಂಡ್ ಮಾತು ಕೇಳಿ ಬಿಟ್ಟೆ : ಸೋಮಣ್ಣ

ಚಿನ್ನದಂತ ಕ್ಷೇತ್ರ ಹೈಕಮಾಂಡ್ ಮಾತು ಕೇಳಿ ಬಿಟ್ಟೆ : ಸೋಮಣ್ಣ
bangalore , ಮಂಗಳವಾರ, 16 ಮೇ 2023 (21:01 IST)
ಹಂಗಾಮಿ ಸಿಎಂ ಬೊಮ್ಮಾಯಿಯವರು ಇಂದು ಮಾಜಿ ಸಚಿವ ವಿ.‌ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಸೋಲಿನ ಬಗ್ಗೆ ಚರ್ಚೆ ಮಾಡಿದ್ರು. ಬಳಿಕ ಮಾತನಾಡಿದ ಮಾಜಿ ಸಚಿವ ಸೋಮಣ್ಣ..ಸಿಎಂ ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಂದಿದ್ದಾರೆನಮಗೆ ಅದು ದೊಡ್ಡದೇನಲ್ಲ, ಸ್ನೇಹಿತನಾಗಿ ಬಂದಿದ್ದಾರೆ..ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ ಪಕ್ಷ ಏನು ಹೇಳಿದೆಯೋ ಮಾಡಿದ್ದೇನೆ...ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ..ಒಂದೊಂದು ಸಲ ಒಳ ಏಟುಗಳು ಆದಾಗ ಇದೆಲ್ಲಾ ಆಗುತ್ತದೆ..ಯಡಿಯೂರಪ್ಪನವರು ಇದುವರೆಗೂ ಕರೆ ಮಾಡಿಲ್ಲ.ಚುನಾವಣೆ ಸಮಯದಲ್ಲಿ ಪ್ರತಿ ದಿನ ಕರೆ ಮಾಡುತ್ತಿದ್ದರು ಚುನಾವಣೆ ಮುಗಿದ ಮೇಲೆ ಮಾಡಿಲ್ಲ ಎಂದ್ ಬೇಸರ ವ್ಯಕ್ತ ಪಡಿಸಿದ್ರು...ಇನ್ನೂ ಗೋವಿಂದರಾಜನಗರ ನನಗೆ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು..ಚಿನ್ನದಂತ ಕ್ಷೇತ್ರವನ್ನು ಬಿಟ್ಟು,ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ..ಬಾಕಿ ತೀರ್ಮಾನವನ್ನು ಪಕ್ಷದ ವರಿಷ್ಠರು ಮಾಡಬೇಕಾಗುತ್ತದೆ, ಮಾಡೋದು ಬಿಡೋದು ಅವರಿಗೆ ಸೇರಿದ್ದು ಮಾಡಿದರೆ ಪಕ್ಷ ಕೂಡಾ ಸ್ಪಂದಿಸಿತು ಎಂಬ ಸಂದೇಶವನ್ನೂ ಕೊಡುತ್ತದೆ ಎಂದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ದಿನ ಸೋಮಣ್ಣಗೆ ಸೂಕ್ತ ಸ್ಥಾನಮಾನ ಪಕ್ಷ ಕೊಡುತ್ತೆ: ಬೊಮ್ಮಾಯಿ