Publish Date: Wed, 24 Aug 2022 (19:00 IST)
Updated Date: Wed, 24 Aug 2022 (19:05 IST)
ವಿಡಿಯೋ ಕಾಲ್ ಮಾಡಿ ಯುವಕನಿಗೆ ಯುವತಿಯಿಂದ ಬ್ಲ್ಯಾಕ್ಮೇಲ್ ಮಾಡಿರುವಂತಹ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ವಾಸು ಬ್ಲ್ಯಾಕ್ಮೇಲ್ಗೊಳಗಾದ ಯುವಕ. ವಾಸುಗೆ ಹಣ ನೀಡುವಂತೆ ಯುವತಿ ಬ್ಲ್ಯಾಕ್ಮೇಲ್ ಮಾಡಿದ್ದು, ವಿಡಿಯೋ ಕಾಲ್ಗೂ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಬೆಳಗ್ಗೆ 9 ಗಂಟೆ ಸುಮಾರಿಗೆ ವಿಡಿಯೋ ಕಾಲ್ ಮಾಡಿ ಯುವತಿ ನಗ್ನಳಾಗಿದ್ದಾಳೆ. ಕೂಡಲೇ ವಾಸು ವಿಡಿಯೋ ಕಾಲ್ ಕಟ್ ಮಾಡಿದ್ದಾನೆ. ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿದ ಯುವತಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕ ವಾಸು ದೂರು ನೀಡಿದ್ದಾರೆ.
geetha
Publish Date: Wed, 24 Aug 2022 (19:00 IST)
Updated Date: Wed, 24 Aug 2022 (19:05 IST)