Select Your Language

Notifications

webdunia
webdunia
webdunia
webdunia

ಮಹಾಬಲೇಶ್ವರ ದೇವಾಲಯ; ಸರಕಾರದ ಸುಪರ್ದಿಯಲ್ಲಿ!

ಮಹಾಬಲೇಶ್ವರ ದೇವಾಲಯ; ಸರಕಾರದ ಸುಪರ್ದಿಯಲ್ಲಿ!
ಕಾರವಾರ , ಗುರುವಾರ, 11 ಅಕ್ಟೋಬರ್ 2018 (18:41 IST)
ಸುಪ್ರೀಂಕೋರ್ಟ್ ನ ಆದೇಶ ಬರುವವರೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯವು ರಾಜ್ಯ ಸರ್ಕಾರದ ಸುಪರ್ದಿಯಲ್ಲಿರಲಿದೆ.

ಸರಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ (ಮುಜರಾಯಿ) ಬಿ.ಎಸ್.ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ದೇವಾಲಯವು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಇಲ್ಲ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೂ ದೇವಾಲಯದಲ್ಲಿ ಯಾವುದೇ ಅಧಿಕಾರ ಇರುವುದಿಲ್ಲ.

ಆಡಳಿತಾಧಿಕಾರಿಯಾಗಿ ನೇಮಕಗೊಂಡ ಕೊಲ್ಲೂರು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಎಚ್.ಹಾಲಪ್ಪ, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ. ದೇವಸ್ಥಾನದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೆ.7ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಅದಕ್ಕೂ ಮುನ್ನ ದೇವಾಲಯದ ಆಡಳಿತಾಧಿಕಾರಿಯಾಗಿ ಹಾಲಪ್ಪ ಅವರು ಆ.30ರಂದು ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್ ನ ಆದೇಶ ಬರುವವರೆಗೆ ಅವರೇ ಆಡಳಿತಾಧಿಕಾರಿಯಾಗಿ ಇರಲಿ ಎಂದು ನಾಗರತ್ನಮ್ಮ ಆದೇಶದಲ್ಲಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಸಿಕ್ರೆ ಬಳ್ಳಾರಿ ಮಗಳಾಗಿ ಕೆಲಸ ಮಾಡ್ತೇನೆ ಎಂದವರಾರು ಗೊತ್ತಾ?