ತುಮಕೂರು: ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತುಮಕೂರು ಡಿವೈಎಸ್ ಪಿ ರಾಮಚಂಧ್ರಪ್ಪ ಈಗ ಅರೆಸ್ಟ್ ಆಗಿದ್ದಾರೆ.
ಜಾಮೀನು ವ್ಯಾಜ್ಯ ಸಂಬಂಧ ದೂರು ನೀಡಲು ಬಂದ ಮಹಿಳೆ ಜೊತೆ ಡಿವೈಎಸ್ ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದರು. ಈ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೇ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಇದೀಗ ಮಹಿಳೆ ನೀಡಿದ್ದ ದೂರಿನ ಅನ್ವಯ ರಾಮಚಂದ್ರಪ್ಪನನ್ನು ಅರೆಸ್ಟ್ ಮಾಡಲಾಗಿದೆ. ಮಧುಗಿರಿ ಪೊಲೀಸರು ರಾಮಚಂದ್ರಪ್ಪನನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಡಿವೈಎಸ್ ಪಿ ಕಿರುಕುಳ ವಿಚಾರ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಇದೀಗ ಅರೆಸ್ಟ್ ಮಾತ್ರವಲ್ಲ, ಇಂತಹ ಕೃತ್ಯವೆಸಗುವ ಪೊಲೀಸರಿಗೆ ತಕ್ಕ ಪಾಠವಾಗುವಂತಹ ಶಿಕ್ಷೆಯೂ ಈ ಅಧಿಕಾರಿ ವಿರುದ್ಧ ಕೈಗೊಳ್ಳಬೇಕಿದೆ. ಪೊಲೀಸ್ ಸ್ಟೇಷನ್ ಎಂದರೆ ಅನ್ಯಾಯಕ್ಕೆ ನ್ಯಾಯ ಸಿಗುವ ಜಾಗ ಎನ್ನಲಾಗುತ್ತದೆ. ಆದರೆ ರಕ್ಷಿಸಬೇಕಾದ ಪೊಲೀಸರೇ ಈ ರೀತಿ ನಡೆದುಕೊಂಡರೆ ಸಾರ್ವಜನಿಕರು ಎಲ್ಲಿಗೆ ಹೋಗಬೇಕು?