ಬೆಂಗಳೂರು: ವಿಡಿಯೋಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ವಿರೋಧ ಪಕ್ಷಗಳ ತೇಜೋವಧೆ ಮಾಡವುದು, ಸುಳ್ಳು ಸುದ್ದಿ ಹರಡುವುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಕರಗತವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆರ್ ಅಶೋಕ್ ವರು ಪೊಲೀಸ್ ಅಧಿಕಾರಿಗಳ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಅಶೋಕ್ ಅವರ ಪೊಲೀಸ್ ಜತೆಗಿನ ವಾಗ್ವಾದದ ವಿಡಿಯೋ ಹಂಚಿಕೊಂಡು ಪೋಸ್ಟ್ ಮಾಡಿರುವ ಕಾಂಗ್ರೆಸ್, ಅಶೋಕ್ ತನ್ನ ನಾಲಗೆ ಹರಿಬಿಟ್ಟು ಸ್ತ್ರೀ ಕುಲವನ್ನು ಅಪಮಾನಿಸಿದ್ದಾರೆಂದು ಆರೋಪಿಸಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡು ಕೌಂಟರ್ ನೀಡಿದ ಅಶೋಕ್ ಅವರು, ವಿಡಿಯೋಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ವಿರೋಧ ಪಕ್ಷಗಳ ತೇಜೋವಧೆ ಮಾಡವುದು, ಸುಳ್ಳು ಸುದ್ದಿ ಹರಡುವುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಕರಗತವಾಗಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ.
ಕಾಮಾಲೆ ಕಣ್ಣಿನವನಿಗೆ ಜಗತ್ತೆಲ್ಲ ಹಳದಿ ಎಂಬಂತೆ ಟೂಲ್ ಕಿಟ್ ನಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್ ಪಕ್ಷದವರಿಗೆ ಎಲ್ಲದರಲ್ಲೂ ಟೂಲ್ ಕಿಟ್ ಕಾಣುತ್ತದೆ. ನಾಚಿಕೆಯಾಗಬೇಕು ಕಾಂಗ್ರೆಸ್ ಪಕ್ಷದ ನೀಚತನಕ್ಕೆ, ಕೀಳು ಮನಸ್ಥಿತಿಗೆ ಎಂದು ಬರೆದುಕೊಂಡಿದ್ದಾರೆ.