Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ವಿರುದ್ಧ ಎಂ ಬಿ ಪಾಟೀಲ್ ಗರಂ

ಕೇಂದ್ರ ಸರ್ಕಾರದ ವಿರುದ್ಧ ಎಂ ಬಿ ಪಾಟೀಲ್ ಗರಂ
ವಿಜಯಪುರ , ಮಂಗಳವಾರ, 15 ಮೇ 2018 (13:26 IST)
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರ್ನಾಟಕಕ್ಕೆ ಬಹುದೊಡ್ಡ ಮೋಸ ಮಾಡಿದೆ. ಚುನಾವಣೆ ಮತದಾನ ಮುಗಿದ ಮೇಲೆ ಮಹಾ ಮೋಸ, ಅನ್ಯಾಯವನ್ನ‌ ರಾಜ್ಯಕ್ಕೆ ಮಾಡಿದೆ ಎಂದು ಕೇಂದ್ರ ಸರ್ಕಾರದ  ಕಾವೇರಿ ಮ್ಯಾನೇಜಮೆಂಟ್ ಸ್ಕೀಮ್ ವಿರುದ್ಧ ವಿಜಯಪುರದಲ್ಲಿ ಎಂ ಬಿ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. 
ಅಲ್ಲದೆ ಇದನ್ನ ರಾಜ್ಯದ ಜನತೆ, ಕಾವೇರಿ ಕಣಿವೆ ರೈತರು, ಮುಖ್ಯಮಂತ್ರಿಗಳು, ನಾನು ಇದನ್ನ ಬಲವಾಗಿ ಖಂಡನೆ, ಪ್ರತಿಭಟಿಸುತ್ತೇವೆ ಎಂದರು. ಇನ್ನು ಸುಪ್ರಿಂ ಕೋರ್ಟನಲ್ಲು ಇದನ್ನ ಪ್ರಶ್ನಿಸುತ್ತೇವೆ. ಬಿಜೆಪಿಯ ಇನ್ನೋಂದು ಮುಖವನ್ನ ಜನರ ಮುಂದಿಡ್ತೀವಿ ಎಂದು ಹರಿಹಾಯ್ದರು. ಇನ್ನು ಮ್ಯಾನೇಜಮೆಂಟ್ ಬೋರ್ಡ ಮೂಲಕ ಹಕ್ಕು ಕಸಿದುಕೊಳ್ಳಲಾಗ್ತಿದೆ.
 
ಎಲ್ಲವು ಅವರ ಸುಪರ್ದಿಗೆ ಹೋಗಲಿದೆ ಎಂದರು. ಅಲ್ಲದೆ 9 ಟಿಎಂಸಿ ನೀರಿನ ಪೈಕಿ 4 ಟಿಎಂಸಿ ನೀಡಲು ನಿರ್ಣಯ ತೆಗೆದುಕೊಂಡಿದ್ದು ಕರಾಳ ದಿನ. ಕೇಂದ್ರ ರಾಜ್ಯಕ್ಕೆ ಮಾಡಿದ ಮಹಾದ್ರೋಹ ಎಂದು ಕಿಡಿ ಕಾರಿದರು. ಇನ್ನು ತಲೆ ಬರಹ ಮಾತ್ರ ಬೇರೆ ಇದೆ. ಇದು ಕೂಡ ಕಾವೇರಿ ಮ್ಯಾನೇಜ್ ಮೆಂಟ್ ನಂತೆ. ಮತದಾನ ಮುಗಿದ ನಂತ್ರ ಈಗ ಸಬ್ಮಿಟ್ ಮಾಡಿದ್ದಾರೆ. ಯಾರ ಒತ್ತಡಕ್ಕೆ ಬಿದ್ದು, ಮತ್ಯಾರಿಗೆ ಸಮಾಧಾನ ಮಾಡಲು ಇದನ್ನ ಮಾಡಿದ್ದಾರೆ ತಿಳಿಯುತ್ತಿಲ್ಲ ಎಂದರು. ಅಲ್ಲದೆ ಕೇಂದ್ರದ ನಾಲ್ಕು ಸಚಿವರು, ಸಂಸದರು ಕೂಡಲೆ ರಾಜೀನಾಮೆ ನೀಡಬೇಕು. ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ ಇಲ್ಲ.
ಕಾವೇರಿ ಕಣಿವೆಯನ್ನ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹರಿಹಾಯ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಕ್ಷೇತ್ರದಲ್ಲೂ ಗೆಲುವು ಸಾಧಿಸಿದ ಹೆಚ್.ಡಿ.ಕುಮಾರಸ್ವಾಮಿ