ಇಂದು ಚಂದ್ರಗ್ರಹಣ: ಬೆಂಗಳೂರಿನಲ್ಲಿ ಬಹುತೇಕ ದೇವಾಲಯಗಳು ಮಧ್ಯಾಹ್ನದಿಂದಲೇ ಬಂದ್

Sampriya
ಭಾನುವಾರ, 7 ಸೆಪ್ಟಂಬರ್ 2025 (09:36 IST)
Photo Credit X
ಬೆಂಗಳೂರು: ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಬಹುತೇಕ ದೇವಾಲಯಗಳಿಗೆ ಮಧ್ಯಾಹ್ನವೇ ಬಾಗಿಲು ಮುಚ್ಚಲಾಗುತ್ತದೆ.

ಭಾರತದಲ್ಲಿ ಇಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳು ಮಧ್ಯಾಹ್ನದ ಬಳಿಕ ಬಂದ್‌ ಆಗಲಿವೆ. ನಗರದ ಪ್ರಸಿದ್ಧ ದೇಗುಲಗಳ ಸಮಯವೂ ಬದಲಾವಣೆಯಾಗಲಿದೆ.

ಬೆಂಗಳೂರಿನ ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ. ಗ್ರಹಣದ ಮರುದಿನ ಸೋಮವಾರ ಬೆಳಗ್ಗೆ 6 ಗಂಟೆಗೆ ಶುದ್ಧೀಕರಣ, ಪುಣ್ಯ ಮಾಡಿ ದರ್ಶನ ವ್ಯವಸ್ಥೆ ಮಾಡಲಾಗಿದೆ.  

ಬನಶಂಕರಿ ದೇಗುಲದಲ್ಲಿ ದೇವಿ ಜನ್ಮದಿನೋತ್ಸವವಿದ್ದು, ಸಂಜೆ 4 ಗಂಟೆಯವರೆಗೆ ಚಂಡಿಕಾ ಹೋಮ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ರಾಹುಕಾಲದ ಪೂಜೆ ಮುಗಿಸಿ 6 ಗಂಟೆಗೆ ದೇವಾಲಯದ ಎಲ್ಲಾ ಕಡೆ ದರ್ಬೆ ಇಟ್ಟು ಬಾಗಿಲು ಬಂದ್‌ ಮಾಡಲಾಗುತ್ತದೆ.

ಕಾಡುಮಲ್ಲೇಶ್ವರ ದೇವಾಲಯ, ಮಧ್ಯಾಹ್ನ 12:30ಕ್ಕೆ ಬಂದ್‌ ಆಗಲಿದೆ.  ಸೋಮವಾರ ಬೆಳಿಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಕಾರ್ಯ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆಯಿದೆ.  

ನಗರದ ಗಾಳಿ ಆಂಜನೇಯ ದೇವಸ್ಥಾನ ಇಂದು ಮಧ್ಯಾಹ್ನ 3 ಗಂಟೆಗೆ ಬಂದ್‌ ಆಗಲಿದ್ದು, ದೇವಾಲಯವನ್ನ ದರ್ಬೆ ಹಾಕಿ ಮುಚ್ಚಲಾಗಿದೆ. ಸೋಮವಾರ ಬೆಳಗ್ಗೆ 4ಕ್ಕೆ ಗ್ರಹಣ ಮುಕ್ತಿ ಶುಚಿತ್ವ ಕಾರ್ಯ ನಡೆಸಲಿದ್ದು, 6 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನುದಾನದಲ್ಲಿ ವಿಪಕ್ಷಗಳ ಕ್ಷೇತ್ರಕ್ಕೆ ತಾರತಮ್ಯ ಯಾಕೆ: ಆರ್ ಅಶೋಕ್ ಗರಂ

ಗೃಹಲಕ್ಷ್ಮಿ ತಪ್ಪು ಮಾಹಿತಿ: ಕೊನೆಗೂ ಸದನಕ್ಕೆ ಬಂದು ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ಜನರು ಕೇಳುವಂತಾಗಿದೆ ಅಧಿವೇಶನ: ಛಲವಾದಿ ನಾರಾಯಣಸ್ವಾಮಿ

ಗೃಹಲಕ್ಷ್ಮಿ ಹಣ ನಡುವೆ ಎರಡು ತಿಂಗಳು ಕೊಡದಿರುವುದಕ್ಕೆ ಕಾರಣವೇನು: ಸರ್ಕಾರಕ್ಕೆ ಬಿಜೆಪಿ ಸದನದಲ್ಲಿ ಲೆಫ್ಟ್ ರೈಟ್

ಸೋನಿಯಾ ಗಾಂಧಿ ಕುಟುಂಬದ ಜೊತೆ ನಾವಿದ್ದೇವೆ: ಬೀದಿಗಿಳಿದು ಹೋರಾಟ ಮಾಡಿದ ಸಿದ್ದರಾಮಯ್ಯ ಮತ್ತು ಕೈ ನಾಯಕರು

ಮುಂದಿನ ಸುದ್ದಿ
Show comments