Publish Date: Sat, 11 Jan 2020 (16:20 IST)
Updated Date: Sat, 11 Jan 2020 (16:22 IST)
ಮಾತನಾಡಬೇಕು ಅಂತ ತನ್ನ ರೂಮಿಗೆ ಲವರ್ ನ ಕರೆಸಿಕೊಂಡ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.
ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದವರು. ಮೇಲಾಗಿ ಪರಸ್ಪರ ಇಷ್ಟಪಟ್ಟು ವರ್ಷಗಳಿಂದ ಲವ್ ಮಾಡ್ತಿದ್ರು.
ಆದರೆ ಪ್ರಿಯತಮೆ ಮುನಿಗಲಾ ಹಾರತಿ ಬೇರೋಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಪ್ರಿಯಕರ ಮೊಹ್ಮದ್ ಶಾಹಿದ್ ಅನುಮಾನ ಪಟ್ಟಿದ್ದಾನೆ.
ನಯವಾಗಿ ತನ್ನ ರೂಮಿಗೆ ಕರೆಸಿಕೊಂಡು ಮುನಿಗಲಾ ಹಾರತಿಯನ್ನ ಕೊಲೆ ಮಾಡಿದ ಪ್ರಿಯಕರ, ನೇರವಾಗಿ ಜೈಲಿಗೆ ಹೋಗಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.
ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಕೇಸ್ ದಾಖಲಾಗಿದೆ.