Select Your Language

Notifications

webdunia
webdunia
webdunia
Wednesday, 9 April 2025
webdunia

ಲವರ್‌ಗೆ ಬೆಂಕಿಯಿಂದ ಸುಟ್ಟ ಪ್ರಿಯಕರ!

ಬೆಂಗಳೂರು
ಬೆಂಗಳೂರು , ಶುಕ್ರವಾರ, 18 ಮಾರ್ಚ್ 2022 (08:16 IST)
ಬೆಂಗಳೂರು  :  ಮದುವೆಯಾಗುವಂತೆ  ಕೇಳಿದ ಯುವತಿಗೆ ಯುವಕನೊಬ್ಬ ಪೆಟ್ರೋಲ್  ಸುರಿದು ಬೆಂಕಿ ಇಟ್ಟ ಕೊಲೆ ಮಾಡಲು ಯತ್ನಿಸಿ ಘಟನೆ ನಗರದಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ದಾಖಾಲಗಿದ್ದ ಯುವತಿ ಕೊನೆಯುಸಿರೆಳೆದಿದ್ದಾಳೆ.
 
ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾನೇಶ್ವರಿ ಎಂಬಾಕೆಯ ಮೇಲೆ ಶಿವಕುಮಾರ್ ಎಂಬ ಯುವಕ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಮೂಲದ ಶಿವಕುಮಾರ ದಾನೇಶ್ವರಿಯನ್ನು ಕಳೆದ 5-6 ವರ್ಷಗಳಿಂದ ಪ್ರೀತಿಸ್ತಾ ಇದ್ದ. ವಿಜಯಪುರದ ಪಿಎಲ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಲೇ ಪ್ರಣಯದ ಹಕ್ಕಿಗಳಾಗಿದ್ದ ದಾನೇಶ್ವರಿ ಹಾಗೂ ಶಿವಕುಮಾರ್ ಬೆಂಗಳೂರಿಗೆ ಬಂದ ನಂತರವೂ ರಿಲೇಷನ್ಶಿಪ್ನಲ್ಲಿ ಇದ್ರು.

ಇತ್ತೀಚಿನ ಮಗಳ ಮದುವೆಗೆ ಮುಂದಾಗಿದ್ರು ದಾನೇಶ್ವರಿ ತಂದೆ ಅಶೋಕ್ ಶರ್ಮಾ. ಬೆಂಗಳೂರಿನಲ್ಲಿ ಇಬ್ಬರೂ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇದ್ರು. ಈ ವೇಳೆ ಮಗಳ ಪ್ರೀತಿಯನ್ನು ಒಪ್ಪಿದ್ದ ಅಶೋಕ್ ಶರ್ಮಾ ಮದುವೆ ಮಾಡಿಸಲೂ ಒಪ್ಪಿದ್ರು.

ಆದ್ರೆ ದಾನೇಶ್ವರಿ ಕೆಳ ಜಾತಿಯವರು ಎಂಬ ಕಾರಣಕ್ಕೆ ಮದುವೆ ನಿರಾಕರಿಸಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆ ಬರೆದಿದ್ದಕ್ಕೆ ಅಪ್ರಾಪ್ತ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ!